ಕರಾವಳಿಕೊಡಗು

ಮಡಿಕೇರಿ:ಬೀದಿನಾಯಿಗಳ ಅಟ್ಟಹಾಸ , 7 ಜನರ ಮೇಲೆ ಮಾರಾಣಾಂತಿಕವಾಗಿ ಎರಗಿದ ಬೀದಿನಾಯಿ

ನ್ಯೂಸ್ ನಾಟೌಟ್: ಕೊಡಗಿನ ಸಿದ್ಧಾಪುರದಲ್ಲಿಬೀದಿನಾಯಿಗಳ ಅಟ್ಟಹಾಸ ಜೋರಾಗಿದೆ.ರಸ್ತೆ ಬದಿಯಲ್ಲಿದ್ದ ೭ ಮಂದಿಗೆ ಬೀದಿನಾಯಿ ಕಚ್ಚಿರುವ ಭಯಾನಕ ಘಟನೆ ಬಗ್ಗೆ ವರದಿಯಾಗಿದೆ.

ವಿದ್ಯಾರ್ಥಿನಿ,ಮಹಿಳೆಯರು ಸೇರಿದಂತೆ ಪುರುಷರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದಾವೆ.ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಏಕಾಏಕಿ ಬಂದೆರಗಿದ ನಾಯಿ ಕಚ್ಚಿ ಪರಾರಿಯಾಗಿದೆ.ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲೆಯಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ರೇಬಿಸ್ ಕೂಡ ಜಾಸ್ತಿಯಾಗಿದೆ.ಹೀಗಾಗಿ ಬೀದಿ ನಾಯಿಗಳ ಬಗ್ಗೆ ಎಚ್ಚರಿಕೆ ತುಂಬಾ ಅಗತ್ಯ.ಅವುಗಳಿಗೆ ವ್ಯಾಕ್ಸಿನೇಶನ್ ಇಲ್ಲದೇ ಇರೋದ್ರಿಂದ ಹಾಗೂ ಎಲ್ಲೆಡೆ ಓಡಾಡುವುದರಿಂದಾಗಿ ಸಾರ್ವಜನಿಕರು ಈ ಬಗ್ಗೆ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕೋದು ಒಳಿತು.ಸದ್ಯ ಆಸ್ಪತ್ರೆಯಲ್ಲಿ 7 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

Related posts

ಕಡಬ: ಅಪ್ರಾಪ್ತ ಪುತ್ರನಿಗೆ ಬೈಕ್ ಕೊಟ್ಟು 20 ಸಾವಿರ ದಂಡ ತೆತ್ತ ತಂದೆ

ಸ್ಕೂಟರ್ ನಲ್ಲೇ 63,449 ಕಿ.ಮೀ.ಸುತ್ತಾಡಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿದ ತಾಯಿ-ಮಗ,20 ವರ್ಷಗಳ ಹಿಂದಿನ ಕನಸು ನನಸು

ಕಾಫಿ ತೋಟದೊಳಗೆ ಎರಡು ಗೋವುಗಳ ಕಳೇಬರ ಪತ್ತೆ ,ಪ್ರಕರಣ ದಾಖಲಿಸಿಕೊಂಡ ಪೊಲೀಸರು