ಕೊಡಗು

ಮಡಿಕೇರಿ: ದೇವರಕೊಲ್ಲಿ ಕಾಡಿನಲ್ಲಿ ಧಗ..ಧಗ ಹೊತ್ತಿಕೊಂಡ ಬೆಂಕಿ..!

ನ್ಯೂಸ್ ನಾಟೌಟ್ : ಬೇಸಿಗೆಯ ಬಿಸಿಲ ಝಳದ ನಡುವೆ ಬೆಂಕಿ ಅವಘಡ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಇದೀಗ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ದೇವರಕೊಲ್ಲಿಯ ಪಂಚಡಿ ಬನೆ ಗುಡ್ಡದ ವ್ಯಾಪ್ತಿಯಲ್ಲಿ ದಟ್ಟನೆ ಹೊಗೆ ಕಾಣಿಸಿಕೊಂಡಿದೆ. ಘಟನೆ ಮಾ.೬ ಸೋಮವಾರ ಸಂಜೆ ವೇಳೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುಡ್ಡದ ಮೇಲಿನಿಂದ ದಟ್ಟನೆ ಹೊಗೆ ಕಾಣಿಸಿಕೊಂಡಿದ್ದು , ಬೆಂಕಿ ತಗುಲಿರಬಹುದು ಎಂದು ಊಹಿಸಲಾಗಿದೆ. ಗ್ರಾಮಸ್ಥರು ಕೂಡಲೇ ಸಂಪಾಜೆ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸುವ ನಿರೀಕ್ಷೆ ಇದೆ.

Related posts

ಮನೆ ಬಾಗಿಲಿಗೆ ಕಾವೇರಿ ತೀರ್ಥ ಮಾರಾಟಕ್ಕೆ ಭಾರಿ ವಿರೋಧ:ಈ ವ್ಯವಸ್ಥೆಯನ್ನು ರದ್ದುಪಡಿಸಿ ಇಲ್ಲದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ ಕರ್ಣಂಗೇರಿಯಲ್ಲಿ ಮಹಾತ್ಮ ಗಾಂಧಿ ಭವ್ಯ ಸ್ಮಾರಕ ನಿರ್ಮಾಣ

ಕೊಡಗಿನ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು