ಕೊಡಗು

ಮಡಿಕೇರಿ: ಅಕ್ರಮ ದನಗಳ ಸಾಗಾಟ, ಇಬ್ಬರ ಬಂಧನ, ಕರು ಸೇರಿದಂತೆ 7 ಗೋವುಗಳ ರಕ್ಷಣೆ

ನ್ಯೂಸ್ ನಾಟೌಟ್: ಅಕ್ರಮವಾಗಿ ಗೋವುಗಳನ್ನು ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಕೊಡಗು ಜಿಲ್ಲೆಯ ಪೆರುಂಬಾಡಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಒಂದು ಕರು ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಪಿರಿಯಾ ಪಟ್ಟಣದಿಂದ ಲಾರಿಯಲ್ಲಿ ಗೋವುಗಳನ್ನು ತುಂಬಿಕೊಂಡು ಗೋಣಿಕೊಪ್ಪಲು , ಪೆರುಂಬಾಡಿ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ವಾಹನವನ್ನು ಪರಿಶೀಲನೆ ನಡೆಸುತ್ತಿದ್ದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಬಂಧಿತರ ವಿರಾಜಪೇಟೆ ನಗರ ಪೊಲೀಸರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿರಾಜಪೇಟೆ ನಗರ ಠಾಣಾಧಿಕಾರಿ ಶ್ರೀಧರ್ ಮತ್ತು ಎಎಸ್‌ಐ ನಾಣಿಯಪ್ಪ ಹಾಗೂ ಸಿಬ್ಬಂದಿ ಸತೀಶ್ , ಸುಬ್ರಮಣಿ, ಮಲ್ಲಿಕಾರ್ಜುನ ಮತ್ತು ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವೀರಾಜಪೇಟೆ ನಗರ ಠಾಣಾಧಿಕಾರಿ ಶ್ರೀಧರ್  ಮತ್ತು ಎಎಸ್‌ಐ ನಾಣಿಯಪ್ಪ ಹಾfಗೂ ಸಿಬ್ಬಂದಿ ಸತೀಶ್ ,  ಸುಬ್ರಮಣಿ, ಮಲ್ಲಿಕಾರ್ಜುನ ಮತ್ತು ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related posts

ಮಡಿಕೇರಿ: ಇಬ್ಬರ ಮೇಲೆ ದಾಳಿ ಮಾಡಿದ ಕಾಡಾನೆ ಕಾಡಿಗಟ್ಟಲು ಬಂದ ಅರಣ್ಯ ಸಿಬ್ಬಂದಿಯನ್ನು ಯಮನ ಪಾದ ಸೇರಿಸಿತು..! ಕೊಡಗಿನಲ್ಲೊಂದು ಹೃದಯವಿದ್ರಾವಕ ಘಟನೆ

ಮಡಿಕೇರಿ: ಆಟೋ ಚಾಲಕನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಗಾಯಾಳು ಗಂಭೀರ

ಕೊಡಗು: ಆಸ್ತಿಗಾಗಿ ಚಿಕ್ಕಪ್ಪನ ಮಗನಿಗೆ ಗುಂಡು ಹಾರಿಸಿದ