ಕ್ರೈಂ

ಮಡಿಕೇರಿ: ಅಕ್ರಮ ಉಡ ಮಾರಾಟಕ್ಕೆ ಯತ್ನ, ಮೂವರು ಅರೆಸ್ಟ್

ಮಡಿಕೇರಿ: ಅಕ್ರಮವಾಗಿ ಉಡ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ.

ಬಂಧಿತರನ್ನು ಸತೀಶ್, ಹನುಮಂತ ಹಾಗೂ ಶೆಟ್ಟಿ ಎಂದು ಹೇಳಲಾಗಿದೆ. ಆರೋಪಿಗಳು ಮಡಿಕೇರಿ-ಮೈಸೂರು ಚೈನ್ ಗೇಟ್ ಬಳಿ 3 ಜೀವಂತ ಉಡಗಳ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಆಧರಿಸಿ ಮಡಿಕೇರಿ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬಂದಿ ದಾಳಿ ನಡೆಸಿ ಮೂವರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋ ಪಿಗಳ ವಶದಲ್ಲಿದ್ದ ಉಡಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಸುಳ್ಯ: ವಿದ್ಯಾರ್ಥಿಗಳಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಟೈರ್ ಹಠಾತ್ ಪಂಕ್ಚರ್..! ಬೈಕ್ ಪಲ್ಟಿಯಾಗಿ ಇಬ್ಬರಿಗೂ ಗಾಯ, ಆಸ್ಪತ್ರೆಗೆ ದಾಖಲು

ಯಾರು ಈ ಭಾರತ ಮೂಲದ ಖಲಿಸ್ತಾನಿ ಉಗ್ರ ? ಕೆನಡಾ ಮತ್ತು ಭಾರತದ ತಿಕ್ಕಾಟಕ್ಕೆ ಕಾರಣವೇನು? ಆರ್‌ಎಸ್‌ಎಸ್ ನಾಯಕರ ಹತ್ಯೆಯಲ್ಲಿತ್ತಾ ಈತನ ಕೈವಾಡ?

ಸುಳ್ಯ: ಕೆಲಸಕ್ಕೆಂದು ಬಂದವ ಮೊಬೈಲ್ ಮತ್ತು ಬೈಕ್‌ ಕದ್ದು ಪರಾರಿ..! ಇಲ್ಲಿದೆ ಸಂಪೂರ್ಣ ಮಾಹಿತಿ