ಕೊಡಗು

ಮಡಿಕೇರಿ: ಆಟೋ ಚಾಲಕನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಗಾಯಾಳು ಗಂಭೀರ

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮನುಷ್ಯನ ಮೇಲೆ ಕಾಡು ಮೃಗಗಳ ದಾಳಿ ಹೆಚ್ಚಾಗಿದೆ. ಇತ್ತೀಚೆಗೆ ಹುಲಿ, ಚಿರತೆ ದಾಳಿ ಪ್ರಕರಣದ ಬಳಿಕ ಇದೀಗ ಕಾಡಾನೆಯೊಂದು ಆಟೋ ಚಾಲಕನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಕಲ್ಲಳ್ಳ ಎಂಬಲ್ಲಿ ಆಟೋ ಚಾಲಕ ಕಿರಣ್ ಹೋಗುತ್ತಿದ್ದಾಗ ಅವರ ಮೇಲೆ ಏಕಾಏಕಿ ಆನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಬೆಳಗ್ಗೆ ೧೦.೩೦ಕ್ಕೆ ದಾಳಿ ನಡೆದಿದ್ದು ಘಟನೆಯಲ್ಲಿ ಆಟೋ ರೀಕ್ಷಾ ಸಂಪೂರ್ಣವಾಗಿ ಜಖಂಗೊಂಡಿದೆ. ತಕ್ಷಣ ಸ್ಥಳೀಯರು ಅವರನ್ನು ಗೋಣಿಕೊಪ್ಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಅವರು ಭೇಟಿ ನೀಡಿದ್ದಾರೆ. ಗಾಯಾಳು ಚಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನುಇಲಾಖೆಯಿಂದ ಭರಿಸುವುದಾಗಿ ತಿಳಿಸಿದ್ದಾರೆ.

Related posts

ಚೆಂಬು ಸಹೋದರ ಕೊಲೆ ಪ್ರಕರಣ: ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿದ ಪೊಲೀಸರು..! ತಲೆಮರೆಸಿಕೊಂಡವರು ಸಿಕ್ಕಿಬಿದ್ದದ್ದು ಹೇಗೆ?

ಜಿಲ್ಲಾ ಮಟ್ಟದ ವ್ಯಾಪಾರ ಮೇಳದಲ್ಲಿ ಮಿಂಚಿದ ಕೊಡಗಿನ ನಾರಿಯರು

ಹಸೆಮಣೆ ಏರಲು ರಮ್ಯಾ ತಯಾರಾದ್ರ?ನನಗೆ ಗೌಡ್ರು ಹುಡುಗ ಹುಡುಕಿ ಕೊಡಿ ಎಂದ ಮೋಹಕ ತಾರೆ!