ಕರಾವಳಿಕೊಡಗು

ಮಡಿಕೇರಿ: ಶಾಲಾ ವಾಹನ ಹಾಗೂ ಸ್ಕೂಟಿ ನಡುವೆ ಅಪಘಾತ,ಸ್ಕೂಟಿ ಸವಾರನಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್ : ಕೂರ್ಗ್ ಪಬ್ಲಿಕ್ ಶಾಲೆ ಶಾಲಾ ವಾಹನ ಹಾಗೂ ಸ್ಕೂಟಿ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಕೊಡಗಿನ ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪಲು ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತೋಕ್ಲು ಗ್ರಾಮದ ಕಾಫಿ ಬೋರ್ಡ್ ಸಮೀಪ ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ.

ಘಟನೆಯ ಪರಿಣಾಮ ಸ್ಕೂಟರ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಘಟನೆ ವೇಳೆ ನೂರಾರು ಜನ ಸ್ಥಳಕ್ಕೆ ಜಮಾಯಿಸಿದ್ದು,ಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಕಂಡು ಬಂದಿತ್ತು.ಡಿಕ್ಕಿಯಾದ ರಭಸಕ್ಕೆ ಸ್ಕೂಟಿ ರಸ್ತೆಗೆ ಬಿದ್ದಿದ್ದು ಚೆಲ್ಲಾಪಿಲ್ಲಿಯಾಗಿತ್ತು.

Related posts

ಪಿಲಿಕುಳ: ಪರಸ್ಪರ ಕಚ್ಚಾಡಿಕೊಂಡು ಪ್ರಾಣ ಬಿಟ್ಟ ಹೆಣ್ಣು ಹುಲಿ

ಸುಳ್ಯ ಮೂಲದ 83 ವರ್ಷದ ವೃದ್ಧ ಮಹಿಳೆಗೆ ಕೊರೊನಾ ಪಾಸಿಟಿವ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು‌ ಮತ್ತೊಂದು ಪ್ರಕರಣ ಪತ್ತೆ

ಸುಳ್ಯ: ಭೀಕರ ರಸ್ತೆ ಅಪಘಾತ;ಕಾರು-ಬೈಕ್ ಡಿಕ್ಕಿ,ಪಲ್ಟಿ ಹೊಡೆದ ಕಾರು..!ಮೂವರಿಗೆ ಗಂಭೀರ ಗಾಯ,ಮಾನವೀಯತೆ ಮೆರೆದ ಜನ..!