ಕೊಡಗು

ಮಡಿಕೇರಿ:ಅಜ್ಜಿ ಮನೆಗೆಂದು ತೆರಳಿದ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ,ಕಾರಣ ನಿಗೂಢ

ನ್ಯೂಸ್ ನಾಟೌಟ್ : ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.ಮಡಿಕೇರಿಯ ಪುಟಾಣಿ ನಗರದ ನಿವಾಸಿ ಕುಮಾರೇಶ್ ಎಂಬವರ ಪುತ್ರಿ ಕೀರ್ತನಾ(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಮಡಿಕೇರಿಯ ಪುಟಾಣಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೀರ್ತನಾ ಶುಕ್ರವಾರ ಬೆಳಗ್ಗೆ , ಬಸ್ ನಲ್ಲಿ ಸೋಮವಾರಪೇಟೆಗೆ ತೆರಳಿದ್ದಳು. ಗಾಂಧಿನಗರದಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುವಾಗ ಮಾರ್ಗ ಮಧ್ಯೆ ಚೌಡ್ಲು ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿಬಂದಿಲ್ಲ. ಸ್ಥಳಕ್ಕೆ ಆಗಮಿಸಿದ ಸೊಮವಾರಪೇಟೆ ಪೋಲಿಸರು ಶವವನ್ನು ಕೆರೆಯಿಂದ ತೆಗೆದು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related posts

ಮಡಿಕೇರಿ -ಮಂಗಳೂರು ಹೆದ್ದಾರಿ ಪ್ರಯಾಣಕ್ಕೆ ಯೋಗ್ಯವೇ ?

ಸಂಪಾಜೆ- ಕಲ್ಲುಗುಂಡಿ: ಪಯಸ್ವಿನಿ ನದಿ ಹೂಳೆತ್ತುವ ಸಮೀಕ್ಷೆ ಆರಂಭ

ಕೊಡಗು: ರಸ್ತೆಯಲ್ಲಿ ತಡರಾತ್ರಿ ಹುಲಿ ಪ್ರತ್ಯಕ್ಷ..! ಜನರಲ್ಲಿ ಆತಂಕ..!