ನಮ್ಮಲ್ಲೇ ಫಸ್ಟ್

ಹಾಡು ಹಕ್ಕಿಗೆ ಬೆಂಗಳೂರಿನ ಸಮರ್ಥನಂ ಶಿಕ್ಷಣ ಸಂಸ್ಥೆ ಅಭಯ, ಶೀಘ್ರದಲ್ಲೇ ಅಂಧ ಗಾಯಕ ಬೆಂಗಳೂರಿನತ್ತ ಪ್ರಯಾಣ

ಸುಳ್ಯ: ನ್ಯೂಸ್ ನಾಟೌಟ್ ಯೂ ಟ್ಯೂಬ್ ಚಾನೆಲ್ ನಲ್ಲಿ ‘ಹಾಡು ಹಕ್ಕಿಗೆ ಕಣ್ಣಿಲ್ಲ’ ಎಂಬ ಶೀರ್ಷಿಕೆಯಡಿ ಪ್ರಸಾರವಾದ ವಿಡಿಯೋವೊಂದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಅಂಧ ಗಾಯಕ ಮಾಧವ ಚೆಂಬು ಅವರ ಗಾಯನ ಶೈಲಿಗೆ ತಲೆದೂಗಿದ ಬೆಂಗಳೂರಿನ ಸಮರ್ಥನಂ ಶಿಕ್ಷಣ ಸಂಸ್ಥೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದರು.

ಸಮರ್ಥನಂ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿದ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ

ಸಮರ್ಥನಂ ನಿರ್ದೇಶಕರಾದ ಮಹಾಂತೇಶ್ ಸೂಚನೆ ಮೇರೆಗೆ ಶಿಖಾ ಶೆಟ್ಟಿ ನೇತೃತ್ವದ ತಂಡ ಅಕ್ಟೋಬರ್ 2 ರಂದು ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿರುವ ಅವರ ಮನೆಗೆ ಭೇಟಿ ನೀಡಿತು. ಇದೇ ವೇಳೆ ಕುಟುಂಬಕ್ಕೆ ಉದ್ಯೋಗ ಭದ್ರತೆ, ಮಾಧವರಿಗೆ ಅಂಧರ ಗಾಯನ ತಂಡದಲ್ಲಿ ಪಾಲ್ಗೊಳ್ಳುವ ಅವಕಾಶ , ಬೆಂಗಳೂರಿನಲ್ಲಿ ಉಚಿತ ಊಟ ವಸತಿ ಸೌಲಭ್ಯ ಹಾಗೂ ಮಗನಿಗೆ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವ ಭರವಸೆ ನೀಡಿದ್ದಾರೆ. ಎಲ್ಲ ಅಂದು ಕೊಂಡಂತೆ ನಡೆದರೆ ಮುಂದಿನ ಕೆಲವೇ ದಿನಗಳಲ್ಲಿ ಮಾಧವ ಚೆಂಬು ಅವರು ವೃತ್ತಿ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಧವ ಚೆಂಬು ನ್ಯೂಸ್ ನಾಟೌಟ್ ತಂಡಕ್ಕೆ ಚಿರ ಋಣಿಯಾಗಿದ್ದೇನೆ ಎಂದು ತಿಳಿಸಿದರು.

Related posts

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕದ ಮುಂದಿನ ಸಿಎಂ..?

ಕಡಬ: ದೇಶ ಕಾಯುವ ಸೈನಿಕನ ಮನೆಗೆ ರಸ್ತೆಯಿಲ್ಲ-ಕರೆಂಟಿಲ್ಲ, 7 ವರ್ಷದಿಂದ ಯೋಧನಿಗೆ ಮಾನಸಿಕ ಕಿರಿಕಿರಿ..! ನ್ಯೂಸ್ ನಾಟೌಟ್ EXCLUSIVE

ಈಕೆ 12 ವರ್ಷದಲ್ಲೇ ಒಲಿಂಪಿಕ್ಸ್ ಸ್ಪರ್ಧಿ, ಪ್ರತಿಯೊಬ್ಬ ಹೆಣ್ಣು ಓದಲೇಬೇಕು ಸ್ಫೂರ್ತಿ ಕಥೆ