ಕ್ರೀಡೆ/ಸಿನಿಮಾ

ಐಪಿಎಲ್ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್: ಚೆನ್ನೈ ಸೂಪರ್ ಕಿಂಗ್ಸ್ ಗೆ 3 ವಿಕೆಟ್ ಸೋಲು

26

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಧೋನಿ ಪಡೆ 2 ನೇ ಸ್ಥಾನಕ್ಕೆ ಕುಸಿದಿದೆ. 137 ರನ್‌ಗಳ ಅಲ್ಪ ಮೊತ್ತ ಬೆನ್ನುಟ್ಟುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಾಕಷ್ಟು ಒದ್ದಾಟ ನಡೆಸಿತು. ಧವನ್ (39 ರನ್), ಹೆಟ್ಮೆಯರ್ ಅಜೇಯ 28 ರನ್ ನಿಂದ ಡೆಲ್ಲಿ 19.4 ಓವರ್‌ಗೆ 7 ವಿಕೆಟ್‌ಗೆ 139 ರನ್‌ಗಳಿಸಿ ಗೆಲುವು ಸಾಧಿಸುವಂತಾಯಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗೆ 5 ವಿಕೆಟ್‌ಗೆ 136 ರನ್‌ಗಳಿಸಿತು. ಅಗ್ರ ಬ್ಯಾಟ್ಸ್ಮನ್ ಗಳಾದ ರುತುರಾಜ್ ಗಾಯಕ್ವಾಡ್ (13 ರನ್), ಡು ಪ್ಲೆಸಿಸ್ (10 ರನ್), ರಾಬಿನ್ ಉತ್ತಪ್ಪ (19 ರನ್), ಮೋಯಿನ್ ಅಲಿ (5 ರನ್) ಬೇಗ ವಿಕೆಟ್ ಕಳೆದುಕೊಂಡರು. ಆದರೆ ಅಂಬಾಟಿ ರಾಯುಡು ಅಜೇಯ 55 ರನ್‌ಗಳಿಸಿ ತಂಡಕ್ಕೆ ಏಕಾಂಗಿ ಹೋರಾಟ ನಡೆಸಿದರು.