ಕೊಡಗು

ಮದೆನಾಡು: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ , ಕರ್ತೊಜಿಯಲ್ಲಿ ಮರ ಸಹಿತ ಭೂ ಕುಸಿತ, ಮಣ್ಣು ತೆರವಿಗೆ ಹರಸಾಹಸ, ಸಾಲುಗಟ್ಟಿ ನಿಂತ ವಾಹನಗಳು

ನ್ಯೂಸ್ ನಾಟೌಟ್: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮದೆನಾಡು ಸಮೀಪ ಕರ್ತೊಜಿಯಲ್ಲಿ ಮರ ಸಹಿತ ಭೂ ಕುಸಿತಗೊಂಡಿದೆ.

ಇದೀಗ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.

ಸೋಮವಾರ ಸಂಜೆ 6.30 ಕ್ಕೆ ದೊಡ್ಡ ಮರವೊಂದು ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ. ಇದೀಗ ರಸ್ತೆಯ ಒಂದು ಬದಿಯ ಮಣ್ಣನ್ನು ತೆರವುಗೊಳಿಸಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಜೆಸಿಬಿ -ಹಿಟಾಚಿ ಬಳಸಿ ಮಣ್ಣು ತೆರವಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಪಾಜೆಯ ಗಡಿಕಲ್ಲು ತನಕ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ ಎಂದು ತಿಳಿದು ಬಂದಿದೆ.

ಭಾರೀ ಮಳೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ಮಡಿಕೇರಿಯಿಂದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಕೊಯನಾಡು ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಕೊಡಗು ಸಂಪಾಜೆ: ಸಂಭ್ರಮದ ಗೌರಿ ಗಣೇಶೋತ್ಸವಕ್ಕೆ ಕ್ಷಣಗಣನೆ, ಶ್ರೀ ಪಂಚಲಿಂಗೇಶ್ವರನ ಆವರಣದಲ್ಲಿ 30ನೇ ವರ್ಷದ ಗೌರಿ -ಗಣೇಶೋತ್ಸವಕ್ಕೆ ಸರ್ವ ಸಿದ್ಧತೆ

ಮಡಿಕೇರಿಯಲ್ಲಿ ಶಕ್ತಿ ಯೋಜನೆ ಎಫೆಕ್ಟ್, KSRTC ಬಸ್‌ನಲ್ಲೇ ಮಹಿಳೆಯರ ಪ್ರಯಾಣ, ಮೂಲೆಗುಂಪಾಗುತ್ತಿವೆಯೇ ಖಾಸಗಿ ಬಸ್‌ಗಳು..?

ಚೆಂಬು ಗ್ರಾಂ.ಪಂ,ಉಪ ಚುನಾವಣೆ: ಬಿಜೆಪಿಗೆ ಗೆಲುವು