Uncategorized

ಮದೆನಾಡಿನಲ್ಲಿ ಮತ್ತೆ ರಸ್ತೆಗೆ ಕುಸಿದ ಗುಡ್ಡದ ಮಣ್ಣು

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ನೆರೆಯ ಕೊಡಗು ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ೨ನೇ ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಕುಸಿದುಬಿದ್ದಿದೆ.

ಪರಿಣಾಮ ಸಂಚಾರ ವ್ಯವಸ್ಥೆಗೆ ಕೆಲವು ಸಮಯ ತೊಂದರೆಯಾಗಿದೆ. ಸರತಿ ಸಾಲಿನಲ್ಲಿ ವಾಹನಗಳು ಕೆಲವು ಹೊತ್ತು ನಿಲ್ಲಬೇಕಾಯಿತು. ತಕ್ಷಣ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಇನ್ನೂ ಕೂಡ ಗುಡ್ಡದ ಮೇಲಿನ ಮಣ್ಣು ರಸ್ತೆಗೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬುಧವಾರ ರಾತ್ರಿ ಮದೆನಾಡಿನ ಸಮೀಪದ ಕರರ್ತೋಜಿ ಎಂಬಲ್ಲಿಯೂ ಭಾರಿ ಗಾತ್ರದ ಮಣ್ಣು ಕುಸಿದು ಬಿದ್ದು ರಸ್ತೆ ಬ್ಲಾಕ್ ಆಗಿತ್ತು.

Related posts

ಗನ್‌ ಹಿಡಿದು ರೀಲ್ಸ್ ಮಾಡಿ ಯುವಕನ ಹುಚ್ಚಾಟ,ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದಾತ ಈಗ ಪೊಲೀಸರ ಅತಿಥಿ

ಹಾಸನಾಂಬೆ ದರ್ಶನಕ್ಕೆ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್..! ಸ್ಥಳದಲ್ಲಿ ನೂಕುನುಗ್ಗಲು,ಘಟನೆ ನಡೆದಿದ್ದೇಗೆ?

ಪಿಒಪಿ ಗಣಪತಿ ಮತ್ತು ರಾಸಾಯನಿಕ ಬಣ್ಣ ಲೇಪಿಸಿದ ವಿಗ್ರಹ ಮಾರಾಟ ಮಾಡಿದರೆ ಕ್ರಿಮಿನಲ್‌ ಕೇಸ್..!, ಅರಣ್ಯ ಮತ್ತು ಪರಿಸರ ಸಚಿವರು ಈ ಖಡಕ್‌ ನಿರ್ಧಾರ ಕೈಗೊಂಡದ್ದೇಕೆ..?