ಕ್ರೈಂದೇಶ-ಪ್ರಪಂಚ

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ! ಆಕೆ ತಪ್ಪಿಸಿಕೊಂಡದ್ದೇ ರೋಚಕ!

ನ್ಯೂಸ್ ನಾಟೌಟ್:  ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ಗುರುವಾರ ವರದಿಯಾಗಿದೆ. 22-24 ವರ್ಷದ ಇಬ್ಬರು ಯುವಕರು ಆಕೆಯ ಗೆಳೆಯನನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಒಂದು ದಿನದ ನಂತರ ಅವರನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮಾರ್ಚ್ 27 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಉಪನಗರವಾದ ವಿರಾರ್‌ನ ಸಾಯಿನಾಥ್ ನಗರ ಪ್ರದೇಶದ ನಿವಾಸಿಗಳಾದ ಇಬ್ಬರ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

ಇಬ್ಬರು ವಾಕಿಂಗ್​ಗೆ ಹೋಗಿದ್ದಾಗ ಘಟನೆ ನಡೆದಿದೆ, ಈ ವಿಚಾರ ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದಾಗಿ ಅವರು ತಿಳಿಸಿದ್ದಾರೆ. ಆರೋಪಿ ಹಾಗೂ ಆಕೆಯ ಪ್ರಿಯಕರನ ನಡುವೆ ವಾಗ್ವಾದ ನಡೆದು ಇಬ್ಬರು ಖಾಲಿ ಬಿಯರ್ ಬಾಟಲಿಯಿಂದ ಹೊಡೆದು, ಇಬ್ಬರೂ ಸೇರಿ ಯುವಕನನ್ನು ಮರಕ್ಕೆ ಕಟ್ಟಿಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಇಬ್ಬರೂ ಯುವತಿಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಆರೋಪಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ, ಮನೆಗೆ ತಲುಪಿ ವಿಷಯ ತಿಳಿಸಿದ ಬಳಿಕ ಪೊಲೀಸರ ಸಹಾಯದಿಂದ ಆ ಯುವಕನನ್ನೂ ರಕ್ಷಿಸಲಾಯಿತು.

Related posts

ಪತ್ನಿಯ ಪರ ಪ್ರಚಾರಕ್ಕಿಳಿದ ನಟ ಶಿವರಾಜ್ ಕುಮಾರ್, ನಟನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ವ್ಯಕ್ತಿಯನ್ನು ಹೊಡೆದು ಜೀವಂತವಾಗಿ ಮಣ್ಣಲ್ಲಿ ಹೂತ ಕ್ರೂರಿಗಳು..! ಆತನನ್ನು ಶ್ವಾನಗಳು ಬದುಕಿಸಿದ್ದೇಗೆ..?

ಹಿಂದೂ ಯುವಕನ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವತಿಯ ಬುರ್ಖಾ ಬಿಚ್ಚಿ ಹೊಡೆದ ಯುವಕರು! ಈ ಜೋಡಿ ಪ್ರೀತಿಸುತ್ತಿದ್ದರೇ..? ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ