ಕ್ರೈಂರಾಜ್ಯವೈರಲ್ ನ್ಯೂಸ್

ಪ್ರೀತಿಸಿದ ಯುವತಿಯ ಖಾಸಗಿ ವಿಡಿಯೋ ವೈರಲ್​​ ಮಾಡಿ ಕೆರೆಗೆ ಹಾರಿ ಯುವಕ ಆತ್ಮಹತ್ಯೆ..! ಪ್ರೇಯಸಿಯ ಜೊತೆ ಜಗಳ..!

ನ್ಯೂಸ್ ನಾಟೌಟ್: ಕ್ಷುಲ್ಲಕ ಕಾರಣಕ್ಕೆ ಪ್ರೀತಿಸಿದ ಯುವತಿಯೊಂದಿಗೆ ಜಗಳ ಮಾಡಿಕೊಂಡು ಪ್ರೇಮ ವೈಫಲ್ಯದ ಕಾರಣದಿಂದ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.15 ರಂದು ನಡೆದಿದೆ.

ಹುಬ್ಬಳ್ಳಿಯ ವಿದ್ಯಾನಗರ ಪೋಲಿಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿಯ ನವನಗರ ನಿವಾಸಿ ಸಂದೇಶ ಯರ್ಕಡ್ (30) ಮೃತ ಯುವಕ ಎಮದು ಗುರುತಿಸಲಾಗಿದೆ. ಈತ ಪ್ರೇಯಸಿ ಜೊತೆ ಕ್ಷುಲಕ ವಿಚಾರಕ್ಕೆ ಜಗಳ ಮಾಡಿ ಉಣಕಲ್ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವಕ ಆತ್ಮಹತ್ಯೆಗೂ ಮುನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ವಾಟ್ಸ್ ​ಆ್ಯಪ್ ಗ್ರೂಪ್ ​ಗಳಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಪ್ರೇಯಸಿ ಜೊತೆಗಿನ ಖಾಸಗಿ ಸಂಭಾಷಣೆಯನ್ನೂ ಎಲ್ಲರಿಗೂ ಶೇರ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ‌ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಎರಗಿದ ಕಾಮುಕ..! ಇಲ್ಲಿದೆ ಸಿಸಿಟಿವಿ ದೃಶ್ಯ..!

ಬೆಂಗಳೂರಿನಲ್ಲಿ ಕೋಲ್ಡ್​ ಡ್ರಿಂಕ್ಸ್ ​​ಗಿಂತ ಬಿಯರ್​ ಹೆಚ್ಚು ಮಾರಾಟ..? ಒಂದು ವರ್ಷಕ್ಕೆ 10.17 ಕೋಟಿ ಲೀಟರ್​ ಬಿಯರ್​ ಸೇಲ್..!

ಸಿದ್ದರಾಮಯ್ಯ ಪರ ‘ಸಾಫ್ಟ್‌ ಕಾರ್ನರ್‌’ ತೋರುತ್ತಿರುವುದೇಕೆ ಬಸನಗೌಡ ಪಾಟೀಲ್‌ ಯತ್ನಾಳ್‌? ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಹಿಂದೂ ಫೈರ್ ಬ್ರ್ಯಾಂಡ್! ಏನಿದು ರಾಜಕೀಯ ವಿರೋಧಿಗಳ ಆತ್ಮೀಯತೆ?