ಕ್ರೈಂರಾಜ್ಯವೈರಲ್ ನ್ಯೂಸ್

ಸೊಂಟಕ್ಕೆ ವೇಲ್ ಬಿಗಿದು ಕೃಷಿ ಹೊಂಡಕ್ಕೆ ಹಾರಿದ ಪ್ರೇಮಿಗಳು..! ಗಂಡನ ಜೊತೆ ತವರು ಮನೆಗೆ ಹೋಗುವುದಾಗಿ ಹೇಳಿ ಬಂದಿದ್ದ 19ರ ಯುವತಿ..!

ನ್ಯೂಸ್‌ ನಾಟೌಟ್‌: ಕೃಷಿ ಹೊಂಡಕ್ಕೆ ಬಿದ್ದು ಮಾಜಿ ಪ್ರಿಯಕರನೊಂದಿಗೆ ವಿವಾಹಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ದೊಡ್ಡಪಲ್ಲಿ ಗ್ರಾಮದಲ್ಲಿ ನಡೆದಿದೆ. ಅನುಷಾ (19), ವೇಣು (21) ಮೃತರು ಎಂದು ಗುರುತಿಸಲಾಗಿದೆ.

ಈ ಜೋಡಿಗಳು 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಗೆ (Love) ಮನೆಯಲ್ಲಿ ಒಪ್ಪದ ಕಾರಣ ಚೌಡರೆಡ್ಡಿ ಎಂಬ ವ್ಯಕ್ತಿ ಜೊತೆಯಲ್ಲಿ ಯುವತಿಗೆ ಮನೆಯವರು ಮದುವೆ ಮಾಡಿದ್ದರು. ಆಷಾಡಕ್ಕೆ ಎಂದು ಮನೆಗೆ ಬಂದಾಗ ಯುವತಿ ಮತ್ತೆ ಹಳೆ ಪ್ರೇಮಿಯ ಜೊತೆ ಸಂಪರ್ಕ ಬೆಳೆಸಿದ್ದಳು. ಮೊದಲೇ ಪ್ರೀತಿಗೆ ನಿರಾಕರಿಸಿದ್ದ ಕುಟುಂಬ. ಹಾಗಾಗಿ ಮತ್ತೆ ಇಬ್ಬರು ಒಟ್ಟಿಗೆ ಬಾಳಲು ಬಿಡುವುದಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಆಷಾಡಕ್ಕೆ ತವರು ಮನೆಗೆ ಬಂದ ವೇಳೆ ಸೊಂಟಕ್ಕೆ ವೇಲ್ ಬಿಗಿದುಕೊಂಡು ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

80 ವರ್ಷದ ಅಜ್ಜಿಯನ್ನು ಪ್ರೀತಿಸಿ ಮದುವೆಯಾದ್ದೇಕೆ 57ರ ವ್ಯಕ್ತಿ..? ಇದಕ್ಕೆ ಆಕೆಯ ಮಕ್ಕಳು ಮಾಡಿದ ಆರೋಪವೇನು..? ಏನಿದು ವಿಚಿತ್ರ ಲವ್ ಸ್ಟೋರಿ?

2024 ರ ಮೊದಲ ಸೂರ್ಯ ಗ್ರಹಣ ಯಾವಾಗ..? ಈ 5 ರಾಶಿಗಳ ಮೇಲಿದೆ ಪ್ರಭಾವ..!

ಸುಳ್ಯ ಬಸ್‌ ಸ್ಟ್ಯಾಂಡ್‌ನಲ್ಲಿ ಕಿರಿಕ್ ಪಾರ್ಟಿ ಕುಡುಕ..! ಮದ್ಯದ ಅಮಲಿನಲ್ಲಿ ಸುಮ್ಮನೆ ಕುಳಿತವರ ಜೊತೆ ಅನುಚಿತ ವರ್ತನೆ, ಚಳಿ ಬಿಡಿಸಿದ ಪೊಲೀಸರು..!