ಕ್ರೈಂವೈರಲ್ ನ್ಯೂಸ್

ಹುಡುಗಿಗಾಗಿ ಮನೆ ಮೇಲೆ ಯುವಕರ ದಾಳಿ..! ತಡರಾತ್ರಿ ಮನೆ, ವಾಹನಗಳ ಮೇಲೆ ಕಲ್ಲು ತೂರಾಟ..!

ನ್ಯೂಸ್ ನಾಟೌಟ್: ಮುಸುಕುಧಾರಿ ಯುವಕರ ಗುಂಪೊಂದು ಗ್ರಾಮಕ್ಕೆ ನುಗ್ಗಿ ನಾಲ್ಕು ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸಿ, ಮನೆಯಲ್ಲಿದ್ದ ವಸ್ತುಗಳನ್ನು ಪುಡಿ ಮಾಡಿದ ಘಟನೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಜ.1ರ ರಾತ್ರಿ ನಡೆದಿದೆ.

15ಕ್ಕೂ ಹೆಚ್ಚು ಪುಂಡರು ಕೃತ್ಯ ಎಸಗಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ಗಳನ್ನು ಜಖಂ ಮಾಡಿದ್ದಾರೆ. ಮನೆ ಕಿಟಕಿ ಗಾಜು, ಟೈಲ್ಸ್‌ಗೆ ಹಾನಿಯಾಗಿದೆ. ಯುವಕರು ಪ್ರೀತಿ ವಿಚಾರದಲ್ಲಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ದಾಳಿಗೊಳಗಾದವರ ಪೈಕಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನ ಮನೆಯೂ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿಕೋನ ಪ್ರೇಮ ಪ್ರಕರಣ ಘಟನೆಗೆ ಕಾರಣವಾಯಿತೇ ಎಂಬ ಅನುಮಾನ ಗ್ರಾಮದ ಜನರು ಹೇಳುತ್ತಿದ್ದು, ನಾವಗೆ ಗ್ರಾಮದ ಹುಡುಗ ಮತ್ತು ಬಾದರವಾಡಿ ಗ್ರಾಮದ ಹುಡುಗ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಇಬ್ಬರೂ ಪ್ರೀತಿಯ ವಿಚಾರಕ್ಕೆ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕುವ ಬಗ್ಗೆ ಜಗಳವಾಡಿದ್ದಾರೆ. ಬಳಿಕ ಹಿರಿಯರು ರಾಜಿ ಸಂಧಾನ ಮಾಡಿದ್ದರು ಎನ್ನಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಕಿಡಿಗೇಡಿಗಳು ರಾತ್ರಿ ದಾಳಿ ಮಾಡಿದ್ದಾರೆ.

ಗಲಾಟೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಸೇರಿದಂತೆ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಕೆಎಸ್​ಆರ್​ಪಿ ತುಕುಡಿ ನಿಯೋಜಿಸಲಾಗಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ. ಕಿಡಿಗೇಡಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದಾಳಿಗೊಳಗಾದ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಮಾಹಿತಿ ಪಡೆದು, ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.

https://newsnotout.com/2024/01/nursery-and-school-leave-in-up/

Related posts

ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ..! ಪೊಲೀಸ್ ಪೇದೆ ದುರಂತ ಅಂತ್ಯ!

ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೌಜನ್ಯ ನ್ಯಾಯಕ್ಕಾಗಿ ‘ಮೌನ’ ಪ್ರತಿಭಟನೆ, ತೆಂಗಿನ ಕಾಯಿ ಒಡೆದು ದುಷ್ಟರ ಸಂಹಾರಕ್ಕಾಗಿ ಹೆಜ್ಜೆ ಹಾಕಿದ ತಿಮರೋಡಿ

ಐವರ್ನಾಡು: ಹಠಾತ್ ಕಾಡು ಹಂದಿ ಅಡ್ಡ ಬಂದು ಬೈಕ್ ಪಲ್ಟಿ..! ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯ, ನಿನ್ನೆ ರಾತ್ರಿ ನಡೆದಿದ್ದೇನು..?