ಕರಾವಳಿ

ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಭರ್ಜರಿ ಮುನ್ನಡೆ, ಬಿಜೆಪಿಗೆ ಸೆಡ್ಡು ಹೊಡೆದಿದ್ದ ಈಶ್ವರಪ್ಪಗೆ ಶಿವಮೊಗ್ಗದಲ್ಲಿ ಭಾರಿ ಹಿನ್ನಡೆ, ಜಗದೀಶ್ ಶೆಟ್ಟರ್ ಗೆ ಮುನ್ನಡೆ

ನ್ಯೂಸ್ ನಾಟೌಟ್: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಸುಮಾರು 30,000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಹುತೇಕ ಗೆಲುವಿನ ಕಡೆಗೆ ನಾಗಾಲೋಟವನ್ನು ಮುಂದುವರಿಸಿದ್ದಾರೆ.

ಮತ್ತೊಂದು ಕಡೆ ಬಿಜೆಪಿಗೆ ಸೆಡ್ಡು ಹೊಡೆದು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿಯ ಮಾಜಿ ನಾಯಕ ಕೆ.ಎಂ.ಈಶ್ವರಪ್ಪ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಕೇವಲ 1,250 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ವಿರುದ್ಧ ಸಿಡಿದೆದ್ದು ಈ ಸಲ ಬಿಜೆಪಿಗೆ ಪಾಠ ಕಲಿಸುತ್ತೇನೆಂದು ಸವಾಲು ಹಾಕಿಕೊಂಡು ಈಶ್ವರಪ್ಪ ಸ್ಪರ್ಧೆ ಮಾಡಿದ್ದನ್ನು ಸ್ಮರಿಸಬಹುದು.

ಜಗದೀಶ್ ಶೆಟ್ಟರ್ ಅಳಿವು ಉಳಿವಿನ ಹೋರಾಟವಾಗಿತ್ತು. ಅವರು ಬೆಳಗಾವಿಯಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಅವರು ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಬಳಿಕ ಕಾಂಗ್ರೆಸ್ ಜೊತೆಗಿನ ಸಖ್ಯ ಸಾಕು ಅಂತ ಮತ್ತೆ ಬಿಜೆಪಿ ಸೇರಿಕೊಂಡಿದ್ದನ್ನು ಸ್ಮರಿಸಬಹುದು.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/loka-sabha-result-news-stars
https://newsnotout.com/2024/06/election-and-tv-court-issued-notice

Related posts

ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ಬಂದಿಳಿದ ಸಿಎಂ

ಸಂಪಾಜೆ: ಅರ್ಚಕರ ಸ್ಕೂಟಿಯನ್ನು ಎತ್ತಿ ಬಿಸಾಡಿ ನೆಲಕಚ್ಚಿ ಮೆಟ್ಟಿ ಹಾಕಿದ ಕಾಡಾನೆ, ದೇವರ ಕಾರ್ಯಕ್ಕೆ ಬಂದವರ ಸ್ಕೂಟಿ ಪುಡಿ..ಪುಡಿ

ಕೊರಗಜ್ಜನನ್ನು ಆರಾಧಿಸುತ್ತಿದ್ದ ಖಾಸಿಂ ಸಾಹೇಬ್ ನಿಧನ