ಕರಾವಳಿಕ್ರೈಂದೇಶ-ಪ್ರಪಂಚದೇಶ-ವಿದೇಶರಾಜಕೀಯ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 1,188 ಮಂದಿ ಕ್ರಿಮಿನಲ್ ಹಿನ್ನೆಲೆ ಉಳ್ಳವರು..! ಚುನಾವಣಾ ಹಕ್ಕುಗಳ ಸಂಸ್ಥೆಯ ವರದಿಯಲ್ಲೇನಿದೆ..?

ನ್ಯೂಸ್ ನಾಟೌಟ್: ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಸ್ಪೋಟಕ ಮತ್ತು ಅಚ್ಚರಿಯ ಮಾಹಿತಿಗಳನ್ನು ಹಂಚಿಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು 8,337 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅದರಲ್ಲಿ1,644 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಮತ್ತು ಅವರು ಹಲವು ಬಗೆಯ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಈ ಅಭ್ಯರ್ಥಿಗಳ ಪೈಕಿ 1,188 ಮಂದಿ ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ದ್ವೇಷದ ಭಾಷಣಕ್ಕೆ ಸಂಬಂಧಿಸಿದ ಆರೋಪಗಳಿವೆ ಎಮದು ವರದಿ ತಿಳಿಸಿದೆ. ಒಟ್ಟಾರೆ ಎಡಿಆರ್ ಒಟ್ಟು 8,360 ಅಭ್ಯರ್ಥಿಗಳ ಪೈಕಿ 8,337 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದೆ. ಚುನಾವಣಾ ಫಲಿತಾಂಶಗಳನ್ನು ಜೂನ್ 4 ರಂದು ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ ಇದರಲ್ಲಿ ಈ ಆರೋಪಿಗಳ ಭವಿಷ್ಯವೂ ಅಡಗಿರುವುದು ಆಘಾತಕಾರಿ ವಿಷಯ.

Click 👇

https://newsnotout.com/2024/05/prajwal-revanna-passport-issue-kannada-news
https://newsnotout.com/2024/05/hindu-muslim-case-court-issue
https://newsnotout.com/2024/05/belthangady-theft-in-house-kannada-news

Related posts

ಯುವಕನ ಕೊಲೆ ಮಾಡಿ ಗುಡ್ಡದಲ್ಲಿ ಎಸೆದಿದ್ದ ನಾಲ್ವರ ಬಂಧನ, ಗಾಂಜಾ ಗಲಾಟೆ ತಂದಿತ್ತು ಪ್ರಾಣಕ್ಕೇ ಕುತ್ತು..!

ಹೆಲಿಕಾಪ್ಟರ್ ಪತನದಲ್ಲಿ ಇರಾನ್ ಅಧ್ಯಕ್ಷ ಸಾವು..? ಎರಡು ಬೆಂಗಾವಲು ಹೆಲಿಕಾಪ್ಟರ್​ಗಳು ಸುರಕ್ಷಿತ

ಭಾರತೀಯ ವಾಯುಪಡೆಗೆ ನೂತನ ಮುಖ್ಯಸ್ಥರ ಆಯ್ಕೆ, ಏರ್ ಮಾರ್ಷಲ್ ಎಪಿ ಸಿಂಗ್ ಅಧಿಕಾರ ಸ್ವೀಕಾರ