ನ್ಯೂಸ್ ನಾಟೌಟ್: ನ್ಯೂಸ್ ನಾಟೌಟ್ ಲೋಗೋ (ಅಧಿಕೃತ ಟ್ರೇಡ್ ಮಾರ್ಕ್ ಹೊಂದಿರುವ ಲೋಗೋ) ಬಳಸಿಕೊಂಡು ವಾಟ್ಸಾಪ್ ಗ್ರೂಪ್ ಮೂಲಕ ಅನಾಮಿಕ ವೆಬ್ ಸೈಟ್ ವೊಂದು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ಇದು ಪತ್ರಕರ್ತರ ಕುಲಕ್ಕೇ ದೊಡ್ಡ ಅವಮಾನವಲ್ಲದೆ ಮತ್ತೇನೂ ಅಲ್ಲ. ತನ್ನದೇ ಆದ ಸಂಸ್ಥೆಯನ್ನು ಆರಂಭ ಮಾಡಿ ಅದರಲ್ಲಿ ಹೆಸರು ಮಾಡುವುದು ಬಿಟ್ಟು ‘ನ್ಯೂಸ್ ನಾಟೌಟ್’ ಲೋಗೋ ವನ್ನು ತನ್ನ ವಾಟ್ಸಾಪ್ ಗ್ರೂಪ್ ಗೆ ಹಾಕಿಕೊಂಡು ಅನಾಮಿಕ ವ್ಯಕ್ತಿ ಕಾರ್ಯಾಚರಿಸುತ್ತಿರುವುದು ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕೆ ಬಂದಿದೆ. ನ್ಯೂಸ್ ನಾಟೌಟ್ ಹೆಸರಲ್ಲಿ ಈ ರೀತಿಯ ಅಕ್ರಮ ಚಟುವಟಿಕೆಯನ್ನು ನಡೆಸುವುದನ್ನು ಸಂಸ್ಥೆಯಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಕೂಡಲೇ ಸಂಬಂಧಪಟ್ಟ ವ್ಯಕ್ತಿ ನ್ಯೂಸ್ ನಾಟೌಟ್ ಲೋಗೋ ಬಳಸಿ ಸುದ್ದಿಯನ್ನು ಹಾಕುವುದನ್ನು ನಿಲ್ಲಿಸಬೇಕು. ಇಲ್ಲವೆ ಮುಂದಿನ ಕಾನೂನು ಕ್ರಮವನ್ನು ಎದುರಿಸಲು ಸಿದ್ಧವಾಗಬೇಕು ಅನ್ನುವುದನ್ನು ಈ ಮೂಲಕ ನಾವು ಸ್ಪಷ್ಟಪಡಿಸುತ್ತಿದ್ದೇವೆ.
ಪ್ರಧಾನ ಸಂಪಾದಕರು, ನ್ಯೂಸ್ ನಾಟೌಟ್