ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಸಾಲ ಪಡೆದ ಮಹಿಳೆ ಹಿಂದಿರುಗಿಸಲು ವಿಫಲ! ಮರುಪಾವತಿಯ ಬದಲು 11ರ ಮಗಳನ್ನು ವಿವಾಹವಾದ ಭೂಪ!

ನ್ಯೂಸ್ ನಾಟೌಟ್:  ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ 11 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ  ವ್ಯಕ್ತಿಯೊಬ್ಬನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿರುವ ಘಟನೆ ಬಿಹಾರದ ಸಿವಾನ್ ನಲ್ಲಿ ಭಾನುವಾರ ನಡೆದಿದೆ.

ಬಾಲಕಿಯ ತಾಯಿಗೆ ಆರೋಪಿ ಮಹೇಂದ್ರ ಪಾಂಡೆ 2 ಲಕ್ಷ ರೂ. ಸಾಲವನ್ನು ನೀಡಿದ್ದ. ಸಾಲವನ್ನು ಆಕೆ ವಾಪಾಸ್‌ ಕೊಡದ ಕಾರಣಕ್ಕೆ ಮಹೇಂದ್ರ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲಕ್ಷ್ಮೀಪುರ ಗ್ರಾಮದ ನಿವಾಸಿ ಮಹೇಂದ್ರ ಪಾಂಡೆ (40) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮೈರ್ವಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಈ ಬಗ್ಗೆ ದೂರು ನೀಡಿದ್ದು,ಆರೋಪಿಯನ್ನು ಪೋಕ್ಸೊ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.

ಬಂಧನದ ಬಳಿಕ ಬಾಲಕಿ ಹಾಗೂ ಆರೋಪಿ ತಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಆರೋಪಿ ಮಹೇಂದ್ರ ಪಾಂಡೆಗೆ ಈಗಾಗಲೇ ಮದುವೆಯಾಗಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾರೆ.

Related posts

ಬಾಲಾಪರಾಧಿ ಆಶ್ರಯ ಕೇಂದ್ರದಲ್ಲಿ ನಡೆಯಿತು ಮನಕಲಕುವ ಘಟನೆ! ಮಲಗಿದ್ದ ಪುಟ್ಟ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ್ದೇಕೆ ಅಧಿಕಾರಿ! ಇಲ್ಲಿದೆ ವೈರಲ್ ವಿಡಿಯೋ

ದ್ವಿಚಕ್ರ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ: ಗಂಭೀರ ಗಾಯಗೊಂಡಿದ್ದ ಸವಾರ ಸಾವು

ಮಹಿಳೆಯರ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಿಸುತ್ತಿದ್ದ ಶಿಕ್ಷಕ..! ಬಂಧನ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ