ಕ್ರೈಂವಿಡಿಯೋವೈರಲ್ ನ್ಯೂಸ್

ಲಿಫ್ಟ್‌ನೊಳಗೆ ಹೊಡೆದಾಟ..! ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮಹಿಳೆಯ ನಡುವೆ ಅಂತದ್ದೇನಾಯ್ತು? ಇಲ್ಲಿದೆ ವಿಡಿಯೋ ವೈರಲ್‌

ನ್ಯೂಸ್‌ ನಾಟೌಟ್‌: ನಿವೃತ್ತ ಐಎಎಸ್ ಅಧಿಕಾರಿ ಮತ್ತು ಕುಟುಂಬದ ನಡುವೆ ತಮ್ಮ ಸಾಕುನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯುವ ವಿಚಾರವಾಗಿ ವಾಗ್ವಾದ ನಡೆದಿದೆ. ನೋಯ್ಡಾದ ಸೆಕ್ಟರ್ 108 ರಲ್ಲಿ ಈ ಘಟನೆ ನಡೆದಿದೆ.

ವಿಡಿಯೋದಲ್ಲಿ, ಇಬ್ಬರು ಮಹಿಳೆಯರು ತಮ್ಮ ಸಾಕು ನಾಯಿಯೊಂದಿಗೆ ಲಿಫ್ಟ್‌ನೊಳಗೆ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆ ಒಬ್ಬ ವ್ಯಕ್ತಿ (ನಿವೃತ್ತ ಐಎಎಸ್ ಅಧಿಕಾರಿ) ಲಿಫ್ಟ್ ಅನ್ನು ಮುಚ್ಚಲು ಅಡ್ಡಿಪಡಿಸಿದ್ದಾರೆ, ಮತ್ತು ಅವರು ಸಾಕುಪ್ರಾಣಿಯೊಂದಿಗೆ ಲಿಫ್ಟ್‌ನಿಂದ ಹೊರಹೋಗುವಂತೆ ಕೇಳಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಐಎಎಸ್ ಅಧಿಕಾರಿ ಲಿಫ್ಟ್‌ಗೆ ಅಡ್ಡಿಪಡಿಸುವುದನ್ನು ಮಹಿಳೆಯೊಬ್ಬರು ಚಿತ್ರೀಕರಿಸಲು ಪ್ರಾರಂಭಿಸಿದಾಗ ಅವರ ನಡುವೆ ಗಲಾಟೆ ನಡೆದಿದೆ. ಎರಡೂ ಕಡೆಯವರು ಹೊಡೆದಾಟದಲ್ಲಿ ತೊಡಗಿದಾಗ ಅಧಿಕಾರಿಯೂ ತನ್ನ ಫೋನ್ ತೆಗೆದುಕೊಂಡು ಚಿತ್ರೀಕರಿಸಲು ಪ್ರಾರಂಭಿಸುತ್ತಾರೆ.

ಬಳಿಕ, ಮಹಿಳೆ ನಿವೃತ್ತ ಐಎಎಸ್‌ ಅಧಿಕಾರಿ ಫೋನ್ ಅನ್ನು ಕಸಿದುಕೊಳ್ಳುವುದು ಕಾಣುತ್ತದೆ. ಇದರಿಂದ ಸಿಟ್ಟಿಗೆದ್ದ ಅಧಿಕಾರಿ ಮಹಿಳೆಯ ಕೂದಲಿನಿಂದ ಹಿಡಿದು ಇಬ್ಬರು ಪರಸ್ಪರ ತಳ್ಳಾಡಿದ್ದಾರೆ. ಹಾಗೂ, ಒಬ್ಬರನೊಬ್ಬರು ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.

ಅಪಾರ್ಟ್‌ಮೆಂಟ್‌ ಸೊಸೈಟಿಯ ಇತರ ನಿವಾಸಿಗಳು ನೋಡ ನೋಡುತ್ತಿದ್ದಂತೆ ಎರಡೂ ಕಡೆಯವರು ವಾಗ್ವಾದ, ತಳ್ಳಾಟ, ಹೊಡೆದಾಟವನ್ನು ಮುಂದುವರಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಮಹಿಳೆಯ ಪತಿ ಮಧ್ಯಪ್ರವೇಶಿಸಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥ* ಳಿಸಿದ್ದಾರೆ. ನಂತರ, ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿ ಮತ್ತು ಇತರ ಉಸ್ತುವಾರಿಗಳು ಘಟನಾ ಸ್ಥಳಕ್ಕೆ ಬಂದು ಲಿಫ್ಟ್‌ನ ಎಲ್ಲಾ ನಿವಾಸಿಗಳನ್ನು ಲಿಫ್ಟ್‌ನಿಂದ ಖಾಲಿ ಮಾಡಿಸುತ್ತಾರೆ.

ಈ ಮಧ್ಯೆ, ಘಟನೆಯ ಬಗ್ಗೆ ನಮಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಮತ್ತು ಎರಡೂ ಕಡೆಯವರ ನಡುವಿನ ಮಾತುಕತೆಯ ಬಳಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದೂ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಭೀಕರ ಅಪಘಾತ, ಕೆವಿಜಿ ನರ್ಸಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ ದಾರುಣ ಸಾವು

ರೀಲ್ ಹೀರೋಗಳ ಮಧ್ಯೆ ಮಾದರಿಯಾದ ರಿಯಲ್ ಹೀರೋ ಸೂಪರ್ ಸ್ಟಾರ್ ಮಹೇಶ್ ಬಾಬು..! ಹಾಸಿಗೆ ಹಿಡಿದ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದ ನಟ..!

ಮಂಗಳೂರಿನ ವಿದ್ಯಾರ್ಥಿನಿ ನಾಪತ್ತೆ ಕೇಸ್ ಗೆ ಟ್ವಿಸ್ಟ್..! ಪುತ್ತೂರಿನ ಮುಸ್ಲಿಂ ಯುವಕ ರೂಂ ಗೆ ಬರುತ್ತಿದ್ದ ಎಂದು ಆರೋಪ..! ಸ್ಕೂಟರ್‌ ಸುರತ್ಕಲ್‌ ಬಳಿ ಪತ್ತೆ!