ಜೀವನಶೈಲಿದೇಶ-ಪ್ರಪಂಚ

ಈರುಳ್ಳಿ ಬೆಲೆ ಏರಿದೆ ಅನ್ನೋ ಚಿಂತೆ ಬಿಟ್ಟು ಈ ರೀತಿಯ ಗ್ರೇವಿ ಸಿದ್ಧಪಡಿಸಿ..!,ಈರುಳ್ಳಿಯಿಲ್ಲದಿದ್ದರೂ ಮನೆ ಮಂದಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಗ್ರೇವಿಗಳಿವು..!

ನ್ಯೂಸ್ ನಾಟೌಟ್ :ಟೊಮೇಟೋ ಬೆಲೆ ಜಾಸ್ತಿಯಾಗಿದ್ದು ಇದೀಗ ಗ್ರಾಹಕರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುತ್ತಿರುವಾಗಲೇ ಮತ್ತೊಂದು ಆಘಾತ ಎದುರಾಗಿದೆ.ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ನೀರು ಬರಿಸುವಂತೆ ಮಾಡಿದೆ.ಈಗಾಗಲೇ ಕಿಲೋ ಒಂದಕ್ಕೆ 70ರಿಂದ 80 ರೂಪಾಯಿಗಳವರೆಗೂ ಈರುಳ್ಳಿ ದೇಶದ ಹಲವೆಡೆ ಮಾರಾಟವಾಗುತ್ತಿದೆ.ಈರುಳ್ಳಿ ಹಾಗೂ ಟೊಮೇಟೋ (tomato price) ಇಲ್ಲದೇ,ಸಾರು ಹೇಗೆ ಮಾಡೋದು ಅನ್ನೋ ಚಿಂತೆ ಮಾಡುವಷ್ಟು ಅವೆರಡು ಪದಾರ್ಥಗಳಿಗೆ ನಾವು ಅವಲಂಬಿತರಾಗಿದ್ದೇವೆ.

ಏನೇ ಅಡುಗೆ ಮಾಡಿದರೂ ಸಾಮಾನ್ಯವಾಗಿ ಈರುಳ್ಳಿಯನ್ನು ಬಳಸದಂತಹ ಅಡುಗೆಗಳು (onion less recipe) ಬಹುತೇಕ ಇಲ್ಲವೆಂದೇ ಹೇಳಬೇಕು.ಹಾಗಾಗಿ ಈರುಳ್ಳಿಯ ಬಳಕೆಯನ್ನು ಕಡಿಮೆ ಮಾಡಿ ಅಡುಗೆ ಮಾಡುವ ವಿಧಾನ ಹೇಗೆ? ಈರುಳ್ಳಿಗೆ ಪರ್ಯಾಯವಾಗಿ ರುಚಿಯಾದ ಅಡುಗೆಗಳನ್ನು ಹೇಗೆ ಮಾಡಬಹುದು (smart kitchen Tips) ಎಂಬುದನ್ನು ನೋಡೋಣ ಬನ್ನಿ.

1. ಈರುಳ್ಳಿಯೇ ಗ್ರೇವಿಗಳಿಗೆ ಬೇಕು ಎಂದು ಯೋಚಿಸುವ ನೀವು ಕೆಲವೊಮ್ಮೆ ಗ್ರೇವಿಗಳಿಗೆ ಕೇವಲ ಹಾಲಿನ ಕ್ರೀಂ ಹಾಗೂ ಮೊಸರು ಕೂಡ ಅದ್ಭುತವಾಗಿ ಕೆಲಸ ಮಾಡುತ್ತದೆ.ಈ ರೀತಿ ಟಿಪ್ಸ್ ಫಾಲೋ ಮಾಡಿದ್ರೆ ದಪ್ಪ ಗ್ರೇವಿಗೆ ಈರುಳ್ಳಿಯೇ ಬೇಕೆಂದೇನಿಲ್ಲ,ಇದು ಯಾವ ಈರುಳ್ಳಿ ಹಾಕಿದ ಗ್ರೇವಿಗೂ ಕಡಿಮೆಯಿರದು.

2. ಗೋಡಂಬಿಯನ್ನು ಕೊಂಚ ಹೊತ್ತು ನೆನೆಸಿ ಪೇಸ್ಟ್‌ ಮಾಡಿ ಗ್ರೇವಿಗೆ ಸೇರಿಸಬಹುದು. ಶ್ರೀಮಂತ, ಕ್ರೀಮೀಯಾಗಿರುವ ಗ್ರೇವಿಯ ಸ್ವಾದಕ್ಕೆ ನೀವೇ ಮನಸೋಲುವಿರಿ.ಹೊಟೇಲುಗಳಲ್ಲಿಯೂ ಸಿಗುವ ಕೆಲವೊಂದು ಟೇಸ್ಟಿ ಗ್ರೇವಿಗೆ ಗೋಡಂಬಿಯೇ ಪ್ರಮುಖ ಕಾರಣ.ಒಂದು ವೇಳೆ ಗೋಡಂಬಿ ಇಷ್ಟವಾಗುವುದಿಲ್ಲ ಎಂದಾದರೆ, ಅದರ ಬದಲು ಬಾದಾಮಿ ಪೇಸ್ಟ್‌ ಮಾಡಿಯೂ ಸೇರಿಸಬಹುದು.

3. ಈರುಳ್ಳಿ ಪೇಸ್ಟನ್ನು ಹಾಕಿ ಮಾಡುವ ಗ್ರೇವಿ ಬದಲಿಗೆ ನೆಲಗಡಲೆಯ ಪೇಸ್ಟ್‌ ಮಾಡಿ ಹಾಕಿ ನೋಡಿ. ನೆಲಗಡಲೆ ಇಷ್ಟಪಡುವ ಮಂದಿ ಇದನ್ನು ಖಂಡಿತ ಇಷ್ಟ ಪಡುತ್ತಾರೆ.ಕೊಂಚ ಡಿಫರೆಂಟ್‌ ಆಗಿರುವ ರುಚಿಯ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

4. ಇನ್ನೊಂದು ವಿಧಾನವೆಂದರೆ ಈರುಳ್ಳಿ ಬದಲಿಗೆ ಟೊಮೇಟೋ ಪೇಸ್ಟ್‌ ಮಾಡೋದು. ಟೊಮೇಟೋವನ್ನು ಬೇಯಿಸಿ, ಸಿಪ್ಪೆ ತೆಗೆದು ಅದನ್ನು ಮಿಕ್ಸಿಗೆ ಹಾಕಿ ರುಬ್ಬಿ. ಇದನ್ನು ನಿಮ್ಮ ಗ್ರೇವಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಹುಳಿಹುಳಿಯಾದ ರುಚಿರುಚಿಯಾದ ಗ್ರೇವಿ ಸಿದ್ಧ.ಪನೀರ್‌ ಜೊತೆಗೆ ಇದು ಉತ್ತಮ ಕಾಂಬಿನೇಶನ್ ಆಗಿದ್ದು,ಬಾಯಿ ಚಪ್ಪರಿಸಿಕೊಂಡು ತಿನ್ತೀರಿ.

5. ಇದೆಲ್ಲ ಯಾವುದು ಬೇಡ ಅನ್ನುವವರು ಕಡಲೆ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಮಿಕ್ಸ್‌ ಮಾಡಿ, ಗಂಟುಗಳಾಗದಂತೆ ಬಿಡಿಸಿಕೊಂಡು ನಿಮ್ಮ ಗ್ರೇವಿಗೆ ಸೇರಿಸಿ ಕುದಿಸಿ. ದಾಲ್‌ ಜೊತೆಗೂ ಇದು ಅತ್ಯುತ್ತಮ ಬೆರಕೆ.

6. ಈರುಳ್ಳಿ ಪರಿಮಳವಿಲ್ಲದಿದ್ದರೆ ಗ್ರೇವಿ ಬಾಯಿಗೆ ಹಿಡಿಸದು ಎನ್ನುವವರಿಗೆ ಸ್ಪ್ರಿಂಗ್‌ ಆನಿಯನ್‌ ಹಾಕಿ. ಸಲಾಡ್‌ಗೆ, ಅಥವಾ ಕೆಲವು ಗ್ರೇವಿಗಳಿಗೆ ಸ್ಪ್ರಿಂಗ್‌ ಆನಿಯನ್‌ ಒಳ್ಳೆಯ ಕಾಂಬಿನೇಶನ್

ಹೀಗೆ ಈರುಳ್ಳಿಗೆ ಬೆಲೆ ಏರಿದೆ ಅನ್ನೋ ಬದಲು ಈರುಳ್ಳಿ ಬದಲಿಗೆ ಈ ರೀತಿಯೂ ತಯಾರಿಸಿ ರುಚಿ ರುಚಿಯಾದ ಗ್ರೇವಿಯನ್ನು ಸಿದ್ಧಪಡಿಸಬಹುದು.

Related posts

Cauvery Water Sharing: ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಭಾರೀ ಆಕ್ರೋಶ;ಹರಿಯುತ್ತಿರುವ ನದಿಗಿಳಿದು ಅರೆಬಟ್ಟೆಯಲ್ಲೇ ಹೋರಾಟ,ರೈತರು ಹೇಳಿದ್ದೇನು?

ಜೀವಂತ ಮಗುವನ್ನು ಮೃತ ಎಂದು ಘೋಷಿಸಿದ ವೈದ್ಯ!

ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ನೋಡಿ ಶಾಕ್ ಆದ ಮಾರ್ಕ್ ಜುಕರ್‌ಬರ್ಗ್..! 15 ಕೋಟಿ ರೂ. ಬೆಲೆಯ ವಾಚ್ ನಲ್ಲಿ ಅಂತದ್ದೇನಿದೆ..? ಇಲ್ಲಿದೆ ವೈರಲ್ ವಿಡಿಯೋ