ಕ್ರೈಂಬೆಂಗಳೂರು

10ಕ್ಕೂ ಹೆಚ್ಚು ಬಾರಿ ಇರಿದು ಪ್ರೇಯಸಿಯ ಕೊಲೆ! 5 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯವಾಗಲು ಕಾರಣವೇನು?

ನ್ಯೂಸ್‌ನಾಟೌಟ್‌:  ಇತ್ತೀಚೆಗೆ ಪ್ರೀತಿ – ಪ್ರೇಮಗಳ ಹೆಸರಲ್ಲಿ ಅತಿರೇಕಗಳು ನಡೆಯುತ್ತಿವೆ ಅದಕ್ಕೆ ಸಾಕ್ಷಿ ಎಂಬಂತೆ ಹುಚ್ಚು ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಚಾಕುವಿನಿಂದ 10ಕ್ಕೂ ಅಧಿಕ ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೀವನಭೀಮಾನಗರದಲ್ಲಿ ಫೆ.೨೮ರಂದು ನಡೆದಿದೆ.

ಅನ್ಯ ಜಾತಿ ಎಂಬ ಕಾರಣಕ್ಕೆ ಕಾರಣಕ್ಕೆ ಪ್ರೇಯಸಿಯ ಪೋಷಕರು ವಿವಾಹ ಮಾಡಿಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಈ ದುಷ್ಕೃತ್ಯ ಎಸಗಿದ್ದಾನೆ ಎಮದು ತಿಳಿದುಬಂದಿದೆ. ಆಂಧ್ರಪ್ರದೇಶದ ಕಾಕಿನಾಡ ಮೂಲದ ೨೫ ವರ್ಷ ವಯಸ್ಸಿನ ಲೀಲಾ ಪವಿತ್ರಾ ಕೊಲೆಯಾದ ವ್ಯಕ್ತಿಯಾಗಿದ್ದಾಳೆ. ಆರೋಪಿ ಆಂಧ್ರಪ್ರದೇಶದ ಶ್ರೀಕಾಕುಲಂ ಮೂಲದ ದಿನಕರ್‌ (21) ಎಂಬಾತ ಎನ್ನಲಾಗಿದೆ.

ಮಂಗಳವಾರ ರಾತ್ರಿ 7.30ರ ಸುಮಾರಿಗೆ ಮುರುಗೇಶ ಪಾಳ್ಯದ ಒಮೆಗಾ ಹೆಲ್ತ್‌ಕೇರ್‌ ಕಂಪನಿಯ ಕಚೇರಿಯ ಎದುರು ಈ ದುರ್ಘ‌ಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೀಲಾ ಪವಿತ್ರ ಎಂಎಸ್ಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾಳೆ. ನಗರದ ಮುರುಗೇಶ ಪಾಳ್ಯದ ಒಮೆಗಾ ಹೆಲ್ತ್‌ಕೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ದಿನಕರ್‌ ದೊಮ್ಮಲೂರಿನ ಲೋಗಿಸ್‌ ಹೆಲ್ತ್‌ಕೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಐದು ವರ್ಷಗಳಿಂದ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಲೀಲಾ ಪವಿತ್ರ ಹಾಗೂ ಆರೋಪಿ ದಿನಕರ್‌ ಜಾತಿ ಬೇರೆ ಬೇರೆಯಾಗಿದ್ದರಿಂದ ಲೀಲಾ ಪವಿತ್ರಾ ಪೋಷಕರು ಮದುವೆಗೆ ನಿರಾಕರಿಸಿದ್ದರು. ಹೀಗಾಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

Related posts

ಸಾಮೂಹಿಕ ರಜೆ ಮಾಡಿದ್ದ 300 ಉದ್ಯೋಗಿಗಳಲ್ಲಿ 30 ಮಂದಿ ವಜಾ..! ರಜೆ ಮುಗಿಸಿ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿಗೆ ಶಾಕ್..!

ಖ್ಯಾತ ನಟ ಸೂರ್ಯ ಆಸ್ಪತ್ರೆಗೆ ದಾಖಲು..! ಶೂಟಿಂಗ್ ವೇಳೆ ನಡೆಯಿತಾ ಅವಘಡ? ಮುಂದೇನಾಯ್ತು?

ಸುಪ್ರೀಂಕೋರ್ಟ್​ನ ಹಿರಿಯ ಮಾಜಿ ವಕೀಲ ನಿಧನ, ಪದ್ಮಭೂಷಣ ಪುರಸ್ಕೃತ ಈ ಸಂವಿಧಾನ ತಜ್ಞನ ಬಗ್ಗೆ ಇಲ್ಲಿದೆ ಮಾಹಿತಿ