ಸುಳ್ಯ

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು: ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ-ಪ್ರೋತ್ಸಾಹ ಧನ ವಿತರಿಸಿದ ರೇಣುಕಾ ಪ್ರಸಾದ್

ನ್ಯೂಸ್ ನಾಟೌಟ್: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿನಿಯನ್ನು ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿನಿ ಆಯಿಷತ್ ಶಿಫಾನ್ ವಾಣಿಜ್ಯ ವಿಭಾಗದಲ್ಲಿ 590 ಅಂಕ ಪಡೆದುಕೊಂಡಿದ್ದರು. ಈ ವಿದ್ಯಾರ್ಥಿನಿಗೆ ಡಾ. ರೇಣುಕಾ ಪ್ರಸಾದ್ ಅವರು ರೂ. 25 ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ಈ ವೇಳೆ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್‌ ಊರುಬೈಲು, ಕಾಲೇಜಿನ ಪ್ರಾಂಶುಪಾಲೆ ಯಶೋದ ರಾಮಚಂದ್ರ, ಉಪಪ್ರಾಂಶುಪಾಲರಾದ ದೀಪಕ್ ವೈ.ಆರ್‌, ಅಕಾಡೆಮಿ ಕಚೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಬೋದಕ ಸಿಬ್ಬಂದಿ ಮತ್ತಿತರರು ಹಾಜರಿದ್ದರು.

Related posts

ಕಡಬದಿಂದ ಅಕ್ರಮವಾಗಿ ದನ ಸಾಗಾಟ, ಸುಳ್ಯದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಕಾರ್ಯಕರ್ತರು

ಅರಂತೋಡು :ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ, ಸ್ಕೂಟಿ ಸವಾರನ ತಲೆಗೆ ಗಂಭೀರ ಗಾಯ

ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ವೈಭವದ ಬ್ರಹ್ಮರಥೋತ್ಸವ, ಈ ಸಂಭ್ರಮದ ಕ್ಷಣಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ