ಕ್ರೈಂವಿಡಿಯೋವೈರಲ್ ನ್ಯೂಸ್

ಸರ್ಕಾರಿ ಬಸ್ ನಲ್ಲಿ ಚಪ್ಪಲಿ ಹಿಡಿದು ಬಡಿದಾಡಿಕೊಂಡು, ಅಂಗಿ- ರವಿಕೆ ಹರಿದುಕೊಂಡ ಮಹಿಳೆಯರು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಈ ಹಿಂದೆ ಹಲವು ಬಾರಿ ಸರ್ಕಾರಿ ಬಸ್ ನಲ್ಲಿ ಮಹಿಳೆಯರು ಕಿತ್ತಾಡಿಕೊಂಡ ಘಟನೆಗಳು ವರದಿಯಾಗಿದ್ದವು, ಹಾಗೆಯೇ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೀಟಿಗಾಗಿ ಕೆಲವು ಮಹಿಳೆಯರು ಕಿತ್ತಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (viral video) ಆಗಿದೆ.

ಒಂದು ಸೀಟಿಗಾಗಿ ಪರಸ್ಪರ ಚಪ್ಪಲಿ ಹಿಡಿದು ಬಡಿದಾಡಿಕೊಂಡು, ಅಂಗಿ- ರವಿಕೆ ಹರಿದುಕೊಂಡ ಘಟನೆ ಬಿದರ್ ನಲ್ಲಿ ನಡೆದಿದೆ. ಈ ಘಟನೆ ಬೀದರ್‌ನಿಂದ ಕಲಬುರಗಿಗೆ ತೆರಳುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ. ತಾನು ಕರ್ಚೀಫ್ ಹಾಕಿಟ್ಟಿದ್ದ ಸೀಟಿನಲ್ಲಿ ಮತ್ತೊಬ್ಬಳು ಬಂದು ಕುಳಿತಿದ್ದರಿಂದ ಸಿಟ್ಟಾದ ಮಹಿಳೆ ಏಳಲು ಹೇಳಿದ್ದಾಳೆ. ಆದರೆ ಕೂತಿದ್ದ ಮಹಿಳೆ ಇದಕ್ಕೆ ಸ್ಪಂದಿಸದೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಇದರಿಂದ ಮಾತಿಗೆ ಮಾತು ಬೆಳೆದಿದೆ.

ಅವಾಚ್ಯ ಶಬ್ದಗಳಿಂದ ಬೈದುಕೊಂಡಿದ್ದಾರೆ. ಪರಸ್ಪರರ ಅಂಗಿ ಹಿಡಿದು ಎಳೆದಾಡಿಕೊಂಡಿದ್ದಾರೆ. ನಂತರ ಚಪ್ಪಲಿ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಜೊತೆಗಿದ್ದ ಹಲವರು ಇವರ ಜಗಳ ಬಿಡಿಸಲು ಯತ್ನಿಸಿದ್ದಾರೆ. ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದಾರೆ.

Click 👇

https://newsnotout.com/2024/05/hindu-muslim-marriage-issue-and-police
https://newsnotout.com/2024/05/vacancy-in-bmtc-conductor-job
https://newsnotout.com/2024/05/love-and-man-mistaken-and-police
https://newsnotout.com/2024/05/koragajja-cinema-director-sudhir-attavara

Related posts

ಸೌಜನ್ಯ ಸಾವಿನ ತನಿಖೆಗೆ ಬಿಜೆಪಿಯಿಂದ ಒತ್ತಾಯ, ಆ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಶಾಸಕರಿಂದ ಪ್ರತಿಭಟನೆ, ನಳಿನ್ ಕುಮಾರ್ ಹೇಳಿದ್ದೇನು?

ನೇಣಿಗೆ ಶರಣಾದ ನವ ವಿವಾಹಿತ

ಐಪಿಎಸ್ ಅಧಿಕಾರಿ ಬಗ್ಗೆ ಚಿತ್ರಹಿಂಸೆಯ ಆರೋಪ! ಹಲ್ಲುಗಳನ್ನು ಮುರಿದು, ವೃಷಣಗಳನ್ನು ಜಜ್ಜಿದ್ದಾರೆಂದ ಕೈದಿಗಳು!