ಕರಾವಳಿ

ಮಡಿಕೇರಿ: ಡಿಪೋ ನಿರ್ವಾಹಕನಿಗೆ ಕೊಲೆ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿದ KSRTC ಬಸ್ ಚಾಲಕ..!, ಬಸ್ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತು, ಇದ್ದಕ್ಕಿದ್ದಂತೆ ಆಗಿದ್ದೇನು..?

ನ್ಯೂಸ್ ನಾಟೌಟ್: ಅಪರೂಪದಲ್ಲಿ ಅಪರೂಪ ಎಂಬ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಿಂದ ವರದಿಯಾಗಿದೆ.

ಕೆಎಸ್ ಆರ್ ಟಿಸಿ ಚಾಲಕನೊಬ್ಬ ಡಿಪೋ ನಿರ್ವಾಹಕನಿಗೆ ಕೊಲೆ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿದ ಅಚ್ಚರಿಯ ಘಟನೆ ಇದಾಗಿದೆ. ಇದೀಗ ಗುಂಡು ಹಾರಿಸಿದ ಬಸ್ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ.

ಮಡಿಕೇರಿ – ಬಿರುನಾಣಿ ಬಸ್ ಚಾಲಕ ವೇಣುಗೋಪಾಲ್ ಎಂಬಾತ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ನಡೆಸುತ್ತಿದ್ದ. ಇದನ್ನು ಬಸ್ ನಲ್ಲಿ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಸೋಷಿಯಲ್ ಮೀಡಿಯಾದಲ್ಲೂ ಈ ವಿಡಿಯೋ ಹರಿದಾಡಿದೆ. ಇದನ್ನು ಪ್ರಶ್ನಿಸಿದ್ದರಿಂದ ರೊಚ್ಚಿಗೆದ್ದ ಚಾಲಕ ಡಿಪೋ ನಿರ್ವಾಹಕ ರೂಪೇಶ್ ಜೊತೆ ಜಗಳಕ್ಕಿಳಿದಿದ್ದಾನೆ. ಜಗಳ ತಾರಕಕ್ಕೇರಿ ಒಂದು ಹಂತದಲ್ಲಿ ಈತ ಕೋವಿ ತಂದು ರೂಪೇಶ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಹಿನ್ನೆಲೆ ಮಡಿಕೇರಿ ನಗರ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ‌ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್ ನನ್ನು ಬಂಧಿಸಿ ನ್ಯಾಯಾಲಯಕ್ಜೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಆರೋಪಿ ವೇಣುಗೋಪಾಲನನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ. ಆರೋಪಿ ಪರ ಕಪಿಲ್ ಕುಮಾರ್ ದುಗ್ಗಳ ವಾದ ಮಂಡಿಸಿದ್ದರು.

Related posts

ಫಾಜಿಲ್ ಹತ್ಯೆ ಪ್ರಕರಣ: ಮೊದಲ ಆರೋಪಿ ಬಂಧನ

ಬಂಟ್ವಾಳ : ಕೋಟ್ಯಂತರ ರೂ. ಮೌಲ್ಯದ ಅಕ್ಕಿ ಮಾಯ..!,ಭಾರೀ ಗೋಲ್ ಮಾಲ್ ಬಯಲಾಗಿದ್ದು ಹೇಗೆ?

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ