ಕ್ರೈಂವಿಡಿಯೋವೈರಲ್ ನ್ಯೂಸ್

ಕೋಲ್ಕತ್ತಾ ವೈದ್ಯೆ ರೇಪ್-ಕೊಲೆ ಪ್ರಕರಣದ ಬೆನ್ನಲ್ಲೆ ರಾತ್ರಿ ಖ್ಯಾತ ನಟಿ ಮೇಲೆ ದಾಳಿ..! ಘಟನೆಯ ವೇಳೆ ಫೇಸ್ ಬುಕ್ ಲೈವ್ ಬಂದ ನಟಿ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್ : ಖ್ಯಾತ ಬೆಂಗಾಲಿ ನಟಿಯೊಬ್ಬರ ಕಾರಿನ ಮೇಲೆ ಬೈಕ್ ಸವಾರನೊಬ್ಬ ದಾಳಿ ಮಾಡಿರುವ ಮತ್ತೊಂದು ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಬೈಕ್ ಸವಾರ ನಟಿ ಪಾಯಲ್ ಮುಖರ್ಜಿ ಕಾರಿನ ಗಾಜು ಒಡೆದು ಹಲ್ಲೆಗೆ ಯತ್ನಿಸಿದ್ದಾನೆ.

ದಕ್ಷಿಣ ಕೋಲ್ಕತ್ತಾದ ಸದರ್ನ್ ಅವೆನ್ಯೂದಲ್ಲಿ ನಿನ್ನೆ(ಆ.23) ರಾತ್ರಿ ಈ ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ, ಬಂಗಾಳಿ ನಟಿ ತನ್ನ ಫೇಸ್‌ಬುಕ್ ಪ್ರೊಫೈಲ್‌ ನಲ್ಲಿ ಲೈವ್ ಸ್ಟ್ರೀಮಿಂಗ್ ಪ್ರಾರಂಭಿಸಿ, ಇಡೀ ಘಟನೆಯನ್ನು ವಿವರಿಸಿದ್ದಾರೆ. ವೀಡಿಯೊದಲ್ಲಿ, ನಟಿ ತನ್ನ ಕಾರಿನ ಒಡೆದ ಗಾಜನ್ನು ತೋರಿಸುತ್ತಾ ಅಳುತ್ತಾ ವಿವರಿಸಿದ್ದಾಳೆ. ಈ ಸಂದರ್ಭದಲ್ಲಿ, ಕೋಲ್ಕತ್ತಾದ ಬೀದಿಗಳಲ್ಲಿ ಮಹಿಳೆಯರ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಬೈಕ್ ಸವಾರ ಕಾರಿನ ಡೋರ್ ತೆರೆಯುವಂತೆ ಕೇಳಿದ ನಾನು ತೆರೆಯಲಿಲ್ಲ. ನಂತರ ಕಿಟಕಿ ಗಾಜು ಹೊಡೆದಿದ್ದಾನೆ. ಗಾಜಿನ ತುಂಡುಗಳು ನನ್ನ ಇಡೀ ದೇಹಕ್ಕೆ ಹೊಡೆದವು. ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ, ಅನೇಕ ಅನುಯಾಯಿಗಳು ಸಹಾಯಕ್ಕಾಗಿ ಕೋಲ್ಕತ್ತಾ ಪೊಲೀಸರಿಗೆ ನಟಿಯ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಪಡೆದ ಕೋಲ್ಕತ್ತಾ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ತಲುಪಿದೆ. ಜೋಧ್‌ಪುರ ಪಾರ್ಕ್ ಬಳಿ ಕರ್ತವ್ಯ ನಿರತ ಪೊಲೀಸರು ಆರೋಪಿ ಬೈಕ್ ಸವಾರನನ್ನು ಹಿಡಿದಿದ್ದಾರೆ ಎನ್ನಲಾಗಿದೆ.

ಬೆಂಗಾಲಿ ಚಿತ್ರಗಳಲ್ಲದೆ, ಪಾಯಲ್ ದಕ್ಷಿಣದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2017ರಲ್ಲಿ ಬೆಂಗಾಲಿ ಚಿತ್ರ ‘ದೇಖ್ ಕಾಮೋ ಲಗೇ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ನಟಿಯ ದೂರಿನ ಆಧಾರದ ಮೇಲೆ ಪೊಲೀಸರು ಸೆಕ್ಷನ್ 126(1)/74/79/324(2)/351(1) ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ನಟಿ ಪಾಯಲ್ ಮುಖರ್ಜಿ ಲೇಕ್ ಅವೆನ್ಯೂ ಮೂಲಕ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ತನ್ನ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿ ಬೈಕ್ ಸವಾರ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದನು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಆದರೆ ಪಾಯಲ್ ಮುಖರ್ಜಿ ನಿಲ್ಲಿಸಲಿಲ್ಲ, ಆದ್ದರಿಂದ ಆರೋಪಿ ಜೋಧ್‌ಪುರ ಪಾರ್ಕ್ ಪ್ರದೇಶದ ಬಳಿ ಕಾರನ್ನು ಬಲವಂತವಾಗಿ ನಿಲ್ಲಿಸಿದರು. ಆರೋಪಿ ಸಿಟ್ಟಿನಿಂದ ಕೂಗುತ್ತಾ ಬೈಕ್ ನಿಂದ ಇಳಿದು ಮುಷ್ಟಿಯಿಂದ ಕಾರಿನ ಗಾಜು ಒಡೆದಿದ್ದಾನೆ. ಆರೋಪಿ ಕೋಲ್ಕತ್ತಾದ ಕಮಾಂಡ್ ಆಸ್ಪತ್ರೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಎಂದು ಹೇಳಲಾಗಿದೆ.

Click

https://newsnotout.com/2024/08/karkala-kannada-news-viral-issue-police-complaint-kannada-news/
https://newsnotout.com/2024/08/karkala-kannada-news-case-sp-statement-and-accusedd/
https://newsnotout.com/2024/08/shikar-dawan-kannada-news-retairment-announced-a-cricketer-kananda-news/

Related posts

‘ಅಪ್ಪ ಹೊಡೆಯುತ್ತಾನೆ’ ಪೊಲೀಸರಿಗೆ ಕರೆ ಮಾಡಿದ 7 ವರ್ಷದ ಮಗು! ಇದಕ್ಕೆ ಪೊಲೀಸ್ ಅಧಿಕಾರಿ ಹೇಳಿದ್ದೇನು?

ಬಿಗ್ ಬಾಸ್‌ ಮಾಜಿ ಸ್ಪರ್ಧಿ,ಲಾಯರ್​ ಜಗದೀಶ್​ರನ್ನು ಬಂಧಿಸಿದ ಪೊಲೀಸರು!

ಸಂಪಾಜೆ: ಕಮರಿಗೆ ಜಾರಿದ ರಿಕ್ಷಾ, ಗ್ಲಾಸ್ ಸೇರಿದಂತೆ ಮುಂಭಾಗ ಜಖಂ