ಕೊಡಗು

ಕೊಡಗು: ಕತ್ತಿಯಿಂದ ಕೊಚ್ಚಿ ಯುವತಿಯ ಬರ್ಬರ ಕೊಲೆ

ಕೊಡಗು: ಯುವತಿಯೊಬ್ಬಳನ್ನು ಕತ್ತಿಯಿಂದ ಕೊಚ್ಚಿ ಬರ್ಬರ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದಲ್ಲಿ ನಡೆದಿದೆ. ಈಕೆಯ ಹತ್ಯೆ ಯಾರು ಮಾಡಿದ್ದಾರೆ,ಯಾಕೆ ಮಾಡಿದ್ದಾರೆ ಅನ್ನುವ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಾಂಗಲ ಗ್ರಾಮದ ಬುಟ್ಟಿಯಂಡ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ. ಈಕೆಯ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ  ಮನೆಯಿಂದ ಹೊರಗೆ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಪ್ರೀತಿ -ಪ್ರೇಮಕ್ಕೆ ಹರಿಯಿತೇ ನೆತ್ತರು? ಅನ್ನುವ ಅನುಮಾನ ವ್ಯಕ್ತವಾಗಿದೆ. ಅಪರಿಚಿತ ವ್ಯಕ್ತಿ ಕೃತ್ಯ ಎಸಗಿದ್ದಾನೆ.

Related posts

ಬಸ್‌-ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಮಡಿಕೇರಿ: ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಚಿಮ್ಮಿ ಬಿದ್ದ ಯುವಕರು,ಸ್ಥಳದಲ್ಲೇ ಯುವಕರಿಬ್ಬರು ದುರಂತ ಅಂತ್ಯ:ರಾತ್ರಿ ಘಟನೆ ನಡೆದಿದ್ದರೂ ಬೆಳಗ್ಗೆಯವರೆಗೂ ಗೊತ್ತೇ ಆಗಲಿಲ್ಲ..!

ಮಡಿಕೇರಿ: ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ,ಕಣ್ಮನ ಸೆಳೆಯುತ್ತಿರುವ ಹೂಗಳ ರಾಶಿ