ಕೊಡಗು

ಮಳೆಗೆ ಕೊಡಗು ತತ್ತರ, ಬರೆ ಕುಸಿತ, ಧರೆಗುರುಳಿದ ಮರ

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ಸತತ ಮಳೆಗೆ ಸಿಕ್ಕಿ ತತ್ತರಿಸಿದೆ. ಅಲ್ಲಲ್ಲಿ ಬರೆ ಕುಸಿತ, ಧರೆಗುರುಳಿದ ಮರ, ಕೊರೆಯುವ ಚಳಿಯಿಂದ ಜನ ಹೈರಾಣಾಗಿದ್ದಾರೆ. ಕೊಡಗಿನ ಹಾರಂಗಿ ಜಲಾಶಯ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ ಉಳಿದಿದೆ.

ಮಡಿಕೇರಿಯಲ್ಲಿ ಮೈ ಕೊರೆಯುವ ಚಳಿ

ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ 4 ಇಂಚು, ಕಾವೇರಿ ಕ್ಷೇತ್ರ ಭಾಗಮಂಡಲ ಸುತ್ತಮುತ್ತಲ ವಿಭಾಗಗಳಲ್ಲಿ 3 ಇಂಚು ಮಳೆಯಾಗಿದೆ. ಜೀವನದಿ ಕಾವೇರಿಯಲ್ಲಿ ನೀರಿನ ಮಟ್ಟ ನಿಧಾನವಾಗಿ ಹೆಚ್ಚುತ್ತಿದೆ.ಮಡಿಕೇರಿ-ಚೆಟ್ಟಳ್ಳಿ ರಸ್ತೆಯ ಅಬ್ಯಾಲದ ಬಳಿ ರಸ್ತೆ ಕುಸಿತಗೊಂಡಿದೆ. ಗೋಣಿಕೊಪ್ಪ- ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು ಸೇತುವೆ ಬಳಿಯ ತಿರುವಿನಲ್ಲಿ ಜೆಸಿಬಿ ಮೇಲೆ ಮರವೊಂದು ಬಿದ್ದಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮರವನ್ನು ತೆರವುಗೊ ಳಿಸಿ ಸುಗಮ ಸಂಚಾರಕ್ಕೆ ಅವಕಾಶ ಅನುವು ಮಾಡಿಕೊಟ್ಟಿದ್ದಾರೆ. ಮಡಿಕೇರಿ ನಗರ ವ್ಯಾಪ್ತಿಯ ಅಂಬೇಡ್ಕರ್ ನಗರ, ಪುಟಾಣಿ ನಗರ ವ್ಯಾಪ್ತಿಯಲ್ಲಿ ಮಳೆಯಿಂದ ಕೆಲವೆಡೆ ಹಾನಿಯಾಗಿದೆ.  

Related posts

ಮಡಿಕೇರಿಯಲ್ಲಿ ಮಾಲಕಿ ಮೇಲೆಯೇ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ ಕಾರ್ಮಿಕ!

23 ದಿನಗಳ ಐತಿಹಾಸಿಕ ಕೊಡವ ಹಾಕಿ ಪಂದ್ಯಾವಳಿ! ಏನಿದು ಕೊಡವ ಕುಟುಂಬಗಳ ಹಾಕಿ ಹಬ್ಬ?

ಕೊಡಗು: ಫೆ.3ರಿಂದ 6ರವರೆಗೆ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ವೈನ್ ಮೇಳ