ಕೊಡಗು

ಮಸೀದಿಯಲ್ಲಿ ನಮಾಜ್‌ ಮಾಡಿದ ಮಹಿಳೆಗೆ 30 ವರ್ಷದಿಂದ ಗ್ರಾಮದಿಂದಲೇ ಬಹಿಷ್ಕಾರ;ಕೊನೆಯುಸಿರೆಳೆದ ಪತಿ ಮುಖ ನೋಡಲು ಬಿಡದೇ ಕಿರುಕುಳ? ಏನಿದು ಘಟನೆ?

ನ್ಯೂಸ್‌ ನಾಟೌಟ್‌ :ಮಹಿಳೆಯೊಬ್ಬರು ಮಸೀದಿಗೆ ಹೋಗಿ ನಮಾಜ್‌ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವರ ಇಡೀ ಕುಟುಂಬಕ್ಕೆ ಕಳೆದ 25 ವರ್ಷದಿಂದ ಗ್ರಾಮದಿಂದಲೇ ಬಹಿಷ್ಕಾರ ಹಾಕಿರುವ ಮನಕಲಕುವ ಘಟನೆಯೊಂದು ಮಡಿಕೇರಿ ಸಮೀಪದ ವಿರಾಜಪೇಟೆಯಿಂದ ವರದಿಯಾಗಿದೆ.

ಕೊಡಗಿನ (Kodagu News) ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಈ ಅಮಾನವೀಯ (Inhuman Behaviour) ಘಟನೆ ನಡೆದಿದೆ ಎನ್ನಲಾಗಿದ್ದು,ಕೇರಳದ ಕೋಜಿಕೋಡಿನ ಜುಭೇದಾ ಅವರು 30 ವರ್ಷದ ಹಿಂದೆ ಅಹಮ್ಮದ್ ಎಂಬುವರನ್ನು ವಿವಾಹವಾಗಿದ್ದರು. ಒಮ್ಮೆ ಜುಭೇದಾ ವಿರಾಜಪೇಟೆಯಲ್ಲಿ ಮಸೀದಿಗೆ ಹೋಗಿ ನಮಾಜ್ ಮಾಡಿದ್ದರು. ಇಷ್ಟಕ್ಕೆ ಜುಭೇದಾ ಮತ್ತು ಅಹಮ್ಮದ್ ಕುಟುಂಬಕ್ಕೆ ಗ್ರಾಮದಿಂದಲೇ ಬಹಿಷ್ಕಾರವನ್ನು ಹಾಕಿದ್ದಾರೆ ಎನ್ನಲಾಗಿದೆ.

ಜುಭೇದಾ ಕುಟುಂಬಸ್ಥರು ಗ್ರಾಮದಲ್ಲಿ ಯಾರನ್ನು ಮಾತನಾಡಿಸುವಂತಿಲ್ಲ.ಮಾತ್ರವಲ್ಲ ಯಾರ ಮನೆಗೂ ಇವರ ಕುಟುಂಬ ಹೋಗುವಂತಿಲ್ಲ.ಯಾರೂ ಇವರ ಮನೆಗೆ ಬರುವಂತಿಲ್ಲ. ಒಂದು ವೇಳೆ ಯಾರಾದರೂ ಇವರನ್ನು ಮಾತನಾಡಿಸಿದರೆ 5,000 ರೂ. ದಂಡ ಕಟ್ಟಬೇಕು. ಮಾತ್ರವಲ್ಲ ಗ್ರಾಮದಲ್ಲಿರುವ ಅಂಗಡಿಗೆ ಹೋಗಿ ಕನಿಷ್ಠ ಒಂದು ಬೆಂಕಿ ಪೊಟ್ಟಣ ಕೂಡ ತರುವಂತಿಲ್ಲ. ಈ ಕುಟುಂಬ ಕಳೆದ 25 ವರ್ಷಗಳಿಂದ ಈ ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ.

ಆದರೆ ಮೊನ್ನೆಯಷ್ಟೇ ಜುಬೇದಾ ಅವರ ಪತಿ ಅಹಮ್ಮದ್‌ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು,ಪತಿ ಕಳೆದುಕೊಂಡ ದುಃಖದಲ್ಲಿದ್ದ ಜುಬೇದಾ ಕುಟುಂಬಕ್ಕೆ, ಪತಿ ಅಂತ್ಯಕ್ರಿಯೆಗೆ ಭಾಗವಹಿಸಲು ಮಸೀದಿ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಬಿಟ್ಟಿಲ್ಲ,ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಬಿಟ್ಟಿಲ್ಲ ಎಂದು ಮಗ ರಶೀದ್ ಆರೋಪಿಸಿದ್ದಾರೆ.

ತಂದೆ ಅಂತ್ಯಕ್ರಿಯೆಗೆ ಬಿಡದ ಹಿನ್ನೆಲೆಯಲ್ಲಿ ರಶೀದ್ ಮತ್ತೊಮ್ಮೆ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಿರಿಯ ಹೆಂಡತಿ ಮಕ್ಕಳು ಪೂರ್ಣ ಆಸ್ತಿಗಾಗಿ ಈ ರೀತಿ ಮಾಡುತ್ತಿದ್ದಾರೆ. ಮಸೀದಿ ಜಮಾಹತ್ ಮಂಡಳಿಯಲ್ಲಿ ಹಿರಿಯ ಹೆಂಡತಿಯ ಕುಟುಂಬದವರೇ ಇದ್ದಾರೆ. ಹೀಗಾಗಿ ಮಸೀದಿ ಮತ್ತು ಜಮಾಹತ್ ಮೂಲಕ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೂ ಅಹಮ್ಮದ್ ಮತ್ತು ರಶೀದ್ ಕಳೆದ ನಾಲ್ಕು ವರ್ಷಗಳ ಹಿಂದೆ 78 ಸಾವಿರ ರೂಪಾಯಿ ದಂಡ ಕಟ್ಟಿ ಮಸೀದಿ ಸದಸ್ಯತ್ವ ಪಡೆದಿದ್ದರು. ಆದರೆ ಎರಡು ವರ್ಷಗಳ ಹಿಂದೆ ಯಾವುದೇ ಮಾಹಿತಿ ನೀಡದೆ ಮಸೀದಿಯ ಸದಸ್ಯತ್ವ ರದ್ದು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Related posts

ಮಡಿಕೇರಿ: ಪಿಯುಸಿ ಫಲಿತಾಂಶ ಬಂದ ಬೆನ್ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ

ಮಡಿಕೇರಿ: ಪ್ರಾಣ ಪಣಕ್ಕಿಟ್ಟು ಜೀವ ರಕ್ಷಿಸಿದ ಬಾಲಕ-ಬಾಲಕಿ

DYSP cyber case: ಡಿವೈಎಸ್‌ಪಿ ಖಾತೆಯಿಂದಲೇ 15 ಲಕ್ಷ ರೂ. ದೋಚಿದ ಸೈಬರ್ ಕಳ್ಳರು..! ಮಡಿಕೇರಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದ ಮುರಳೀಧರ್ ವಂಚನೆಗೆ ಒಳಗಾಗಿದ್ದೇಗೆ..?