ಕರಾವಳಿಕೊಡಗು

ಮಡಿಕೇರಿ: ಲಾಡ್ಜ್‌ನಲ್ಲಿ ಐಟಿ ಕಂಪೆನಿ ಉದ್ಯೋಗಿ ನೇಣಿಗೆ ಶರಣು..!ಯುವಕನ ಈ ನಿರ್ಧಾರಕ್ಕೆ ಕಾರಣವೇನು ?

ನ್ಯೂಸ್ ನಾಟೌಟ್‌:ಲಾಡ್ಜ್‌ವೊಂದರಲ್ಲಿ ಬೆಂಗಳೂರು ಮೂಲದ ಐಟಿ ಕಂಪೆನಿ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ.ಬೆಂಗಳೂರು ಮೂಲದ ಸಂದೇಶ್‌(35) ಮೃತ ದುರ್ದೈವಿಯೆಂದು ತಿಳಿದು ಬಂದಿದೆ.

ನಗರದ ಕೊಹಿನೂರ್‌ ರಸ್ತೆಯಲ್ಲಿರುವ ಲಾಡ್ಜ್ ಗೆ 2 ದಿನಗಳ ಹಿಂದೆ ಬಂದಿದ್ದ ಎನ್ನಲಾಗಿದ್ದು, ಸಂದೇಶ್‌ ಮಂಗಳವಾರ ಕೊಠಡಿ ಖಾಲಿ ಮಾಡುವುದಾಗಿ ಹೇಳಿ ಶುಲ್ಕವನ್ನು ಮೊದಲೇ ಪಾವತಿಸಿದ್ದ. ಆದರೆ ಮಂಗಳವಾರ ಸ್ನಾನದ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.ಸಾವಿಗೂ ಮೊದಲು ಡೆತ್‌ನೋಟ್‌ ಬರೆದಿಟ್ಟಿದ್ದು, ಪತ್ತೆಯಾಗಿದೆ. ಮಡಿಕೇರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Related posts

ಸುಳ್ಯ: ‘ಸೌಜನ್ಯ ಹೋರಾಟಕ್ಕೆ ಉಚಿತ ವಾಹನ ವ್ಯವಸ್ಥೆ ಇಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ’ ಪಯಸ್ವಿನಿ ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹೇಳಿದ್ದೇನು..?

ವೆಂಕಪ್ಪರ ಹೆಸರಾಯಿತು ‘ಪಂಕಪ್ಪ’, ಲಿಲ್ಲಿ ಬದಲಾದರೂ ‘ಅಲ್ಲಿ ಅಪಾಯ’, ಲೋಕಸಭಾ ಚುನಾವಣೆಯ ಮತ ಚೀಟಿಯಲ್ಲಿ ವ್ಯಕ್ತಿಗಳ ಮಾನ ಹರಾಜು

ಕಡಬ: ರೆಂಜಿಲಾಡಿಯಲ್ಲಿ ಇಬ್ಬರ ಸಾವಿಗೆ ಕಾರಣವಾಗಿ ಸೆರೆಸಿಕ್ಕಿದ್ದ ಕಾಡಾನೆ ಹಠಾತ್‌ ಸಾವು..! ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಕೊನೆಯುಸಿರೆಳೆದದ್ದು ಹೇಗೆ..?