ಕೊಡಗು

ಭಾಗಮಂಡಲ: ಕಟ್ಟಿ ಹಾಕಲು ಬಂದ ಮಹಿಳೆಗೆ ಮಾರಣಾಂತಿಕವಾಗಿ ತಿವಿದ ಎತ್ತು..! ತೀವ್ರ ರಕ್ತಸ್ರಾವದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಕಟ್ಟಿ ಹಾಕಲು ಬಂದ ಮಹಿಳೆಯ ಮೇಲೆ ಎತ್ತೊಂದು ಮಾರಣಾಂತಿಕವಾಗಿ ಎರಗಿ ತಿವಿದು ಗಂಭೀರ ಗಾಯಗೊಳಿಸಿರುವ ಘಟನೆ ತಡವಾಗಿ ಭಾಗಮಂಡಲ ಸಮೀಪದ ಚೆಟ್ಟಿಮಾನಿಯಿಂದ ವರದಿಯಾಗಿದೆ.

ಭಾನುವಾರ (ಸೆ.1) ಬೆಳಗ್ಗೆ ದುರ್ಘಟನೆ ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಶಸ್ತ್ರಚಿಕಿತ್ಸೆ ಅಗತ್ಯ ಇರುವುದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಗಿದೆ. ಚೆಟ್ಟಿಮಾನಿಯ ಅಚ್ಚುಪಂಡ ಮನೆಯ ಚಂದ್ರಾವತಿ ಭಾನುವಾರ ಬೆಳಗ್ಗೆ ತಮ್ಮ ಮನೆಯ ಸಾಕು ಎತ್ತುವನ್ನು ಕಟ್ಟಿ ಹಾಕುವುದಕ್ಕಾಗಿ ಹೋಗಿದ್ದಾರೆ. ಈ ವೇಳೆ ಏಕಾಏಕಿ ಎತ್ತು ಅವರ ಮೇಲೆ ದಾಳಿ ನಡೆಸಿದೆ. ಪರಿಣಾಮ ಅವರ ತೊಡೆಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಇದೀಗ ಮಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆ ಇದೆ ಎಂದು ಕುಟುಂಬಸ್ಥರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

Related posts

ಮಡಿಕೇರಿ: ಕರ್ತವ್ಯಕ್ಕೆ ತೆರಳುತ್ತಿದ್ದಾತನ ಮೇಲೆ ಎರಗಿದ ಒಂಟಿಸಲಗ..! ಜೀವ ಉಳಿಸಿಕೊಳ್ಳಲು ಆತ ಮಾಡಿದ್ದೇನು..?

ಧಗ ಧಗ ಹೊತ್ತಿ ಉರಿದ ಟಯರ್ ಅಂಗಡಿ, ಲಕ್ಷಾಂತರ ರೂ.ನಷ್ಟ

Madikeri:ರಸ್ತೆ ಬದಿಯಲ್ಲಿದ್ದ ಕಾರಿಗೆ ಡಿಕ್ಕಿಯಾದ ಕಾರು,ಕೊಡಗಿನ ಯುವಕ ದುರಂತ ಅಂತ್ಯ