ಕೊಡಗುಕ್ರೈಂ

ಕೊಡಗು: ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿ ಮೇಲೆ ಆನೆ ದಾಳಿ..! ಕಾಡಾನೆ ಕಾಲ್ತುಳಿತಕ್ಕೆ ಸಿಕ್ಕಿ ವ್ಯಕ್ತಿ ಸಾವು..!

ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಕಾಡುಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹುಲಿ ಸೆರೆಹಿಡಿಯಲು ಹೋಗಿದ್ದಾಗ ಕಾರ್ಯಾಚರಣೆಗೆ ಬಂದಿದ್ದ ಆನೆ ಭೀಮ ಮತ್ತು ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ನಡೆಸಿತ್ತು.

ಇಂದು(ಎ.15) ಕೊಡಗಿನಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ನಡೆಸಿದ ದಾಳಿಯಿಂದ ವಾಕಿಂಗ್‌ ಹೋಗಿದ್ದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಪೊನ್ನಂಪೇಟೆ (Ponnampete) ತಾಲ್ಲೂಕಿನ ಬೀರುಗ ಗ್ರಾಮದ ಚಾಮುಂಡಿಕೊಲ್ಲಿ ರಸ್ತೆಯಲ್ಲಿ ಘಟನೆ ನಡೆದಿದೆ. ಅಯ್ಯಮಾಡ ಮಾದಯ್ಯ (63) ಕಾಡಾನೆ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಇವರು ಮುಂಜಾನೆ ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ, ಕಾಫಿ ತೋಟದ ನಡುವಿನಿಂದ ನುಗ್ಗಿಬಂದ ಕಾಡಾನೆ ಏಕಾಏಕಿ ದಾಳಿ‌ ನಡೆಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ‌ ಭೇಟಿ ನೀಡಿದ್ದಾರೆ.

ಗ್ರಾಮ ಹಾಗೂ ಸುತ್ತಮುತ್ತಲಲ್ಲಿ‌ ಆನೆಗಳ ಹಿಂಡು ಸಂಚಾರ ಮಾಡುತ್ತಿದೆ. ಇದರಿಂದ ಮನೆಯಿಂದ ಹೊರಬೀಳಲೂ ಭಯವಾಗುತ್ತಿದೆ. ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ತೋಟದ ಕೆಲಸ ಮಾಡಲು ಕೂಲಿ ಕಾರ್ಮಿಕರು ಭಯಭೀತಿಯಿಂದಾಗಿ ಬರುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸುಳ್ಳು ಹೇಳಿ ರವೀಂದರ್‌ ನನ್ನನ್ನು ಮದುವೆಯಾದ ಎಂದು ಬೇಸರ ತೋಡಿಕೊಂಡದ್ದೇಕೆ ನಟಿ! ಮೌನ ಮುರಿದ ಮಹಾಲಕ್ಷ್ಮೀ ಹೇಳಿದ್ದೇನು? ಜನು ಜನುಮದ ಅನುಬಂಧ ಎನ್ನುತ್ತಿದ್ದ ಜೋಡಿಗೆ ಒಂದು ವರ್ಷದೊಳಗೆ ಏನಾಯ್ತು?

ಆಟವಾಡುತ್ತಿದ್ದ ವೇಳೆ ಹಾವನ್ನು ಕಚ್ಚಿ ಕೊಂದ 1 ವರ್ಷದ ಮಗು..! ಮಗುವನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದೇನು..?

ಮಂಗಳೂರು: ಶೋ ರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಅಪಘಾತ, ನುಜ್ಜುಗುಜ್ಜಾದ ಕಾರಿನ ಎದುರು ಕಣ್ಣೀರಿಟ್ಟ ಚಾಲಕ