ಕೊಡಗು

ಮಡಿಕೇರಿ: ಶೀಘ್ರದಲ್ಲೇ ಜನರಲ್ ತಿಮ್ಮಯ್ಯ ಪ್ರತಿಮೆ ಮರುಸ್ಥಾಪನೆ: ಸಚಿವ ಎನ್.ಎಸ್. ಬೋಸರಾಜು

ನ್ಯೂಸ್‌ ನಾಟೌಟ್‌: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೋಮವಾರ ಮಡಿಕೇರಿಗೆ ಭೇಟಿ ನೀಡಿದರು. ಈ ಸಂದರ್ಭ ಕಳೆದ ಕೆಲವು ದಿನಗಳ ಹಿಂದೆ ಮಡಿಕೇರಿಯಲ್ಲಿ ಸರ್ಕಾರಿ ಬಸ್‌ ಡಿಕ್ಕಿಯಾಗಿ ಹಾನಿಯಾಗಿದ್ದಜನರಲ್ ತಿಮ್ಮಯ್ಯ ವೃತ್ತ ಹಾಗೂ ಪ್ರತಿಮೆಯನ್ನು ಪರಿಶೀಲಿಸಿದರು.

ಬಸ್‌ ಡಿಕ್ಕಿಯಾದ ಮಡಿಕೇರಿ ವೃತ್ತಕ್ಕೆ ಮತ್ತು ಪ್ರತಿಮೆಯನ್ನು ಸಂರಕ್ಷಿಸಿರುವ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿದ ಸಚಿವರು ಘಟನೆ ಬಗ್ಗೆ ಮಾಹಿತಿ ಪಡೆದರು. ಶೀಘ್ರದಲ್ಲಿ ಸುರಕ್ಷಿತ ರೀತಿಯಲ್ಲಿ ಪ್ರತಿಮೆ ಮರುಸ್ಥಾಪನೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಮಡಿಕೇರಿಗೂ ವ್ಯಾಪಿಸಿದ ಹಿಜಾಬ್ ವಿವಾದ, ಕೇಸರಿ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು..!

ಇಸ್ಲಾಂಗೆ ಮತಾಂತರವಾಗಲು ನಕಾರ;ಗರ್ಭಿಣಿಗೆ ವಿಷಕುಡಿಸಿ ಕೊಲೆ,ದುರಂತ ಅಂತ್ಯ ಕಂಡ ಹಿಂದೂ ಯುವತಿಯ ಜೀವನ

ಫೆ.11ರಂದು ಸುಳ್ಯ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ