ಕೊಡಗು

ಮಡಿಕೇರಿ:ಗದ್ದೆಯಲ್ಲಿ ನವಜಾತ ಶಿಶುವಿನ ಶವವವನ್ನು ಹೂತು ಹಾಕಿದ ದುರುಳರು..!ಏನಿದು ಹೃದಯ ವಿದ್ರಾವಕ ಘಟನೆ?

ನ್ಯೂಸ್‌ ನಾಟೌಟ್‌:  ಗದ್ದೆಯಲ್ಲಿ ನವಜಾತ ಶಿಶುವಿನ (Newly born Child) ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಈ ಶವವನ್ನು ಮಣ್ಣಿನಲ್ಲಿ ಹೂತು ಹಾಕಿದ್ದು ಯಾರು? ಯಾಕಾಗಿ ಹೂತು ಹಾಕಿದರು ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಕೊಡಗು ಜಿಲ್ಲೆ (Kodagu News) ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆಯಲ್ಲಿರುವ ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ಈ ಘಟನೆ ಸಂಭವಿಸಿದೆ.ಗದ್ದೆಯಲ್ಲಿ ಯಾರೋ ಗುಂಡಿ‌ ಅಗೆದು ಹಾಕುತ್ತಿರುವುದನ್ನು ಸ್ಥಳೀಯರು ನೋಡಿದ್ದರೂ ಸತ್ತ ಪ್ರಾಣಿಗಳ ಮೃತದೇಹವನ್ನು ಹೂಳಿರಬಹುದು ಎಂದು ಭಾವಿಸಿದ್ದರು.

ಆದರೂ ಸಂಜೆ ವೇಳೆಗೆ ಮತ್ತೆ ಈ ಬಗ್ಗೆ ಅನುಮಾನಗಳು ವ್ಯಕ್ತವಾದವು. ಆ ಸ್ಥಳದ ಮಣ್ಣನ್ನು ತೆಗೆದು ನೋಡಿದಾಗ ಇಂದೇ ಜನಿಸಿದ ಮಗುವಿನ ಮೃತದೇಹವೆಂದು ಕಂಡುಬಂದಿದೆ.ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದು, ಈ ಮಗುವಿನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕದ ಹಿನ್ನಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts

ಸುಳ್ಯದ ದೋಸ್ತ್ ವಾಹನಕ್ಕೆ ಕಾರು ಡಿಕ್ಕಿ,ಮಡಿಕೇರಿಯಲ್ಲಿ ನಡೆದ ಘಟನೆ,ಒಬ್ಬರಿಗೆ ಗಾಯ

ಸಂಪಾಜೆ: ಜಮಾಬಂಧಿ ಕಾರ್ಯಕ್ರಮ ಸಂಪನ್ನ, ಆದಾಯ ಕ್ರೂಢೀಕರಿಸುವ ಸವಾಲಿನ ಬಗ್ಗೆ ಚರ್ಚೆ, ಸರ್ಕಾರಿ ಶಾಲೆಗೆ ಭೇಟಿ, ಪರಿಶೀಲನೆ

ಪೆರಾಜೆ, ಚೆಂಬು ಗ್ರಾಮದಲ್ಲಿ ಜೋರು ಶಬ್ಧ, ಲಘು ಕಂಪನ..!