ಕರಾವಳಿಕೊಡಗುಸುಳ್ಯ

‘ಬೀರ್ಯ ಕೊಡವ ಸಿನಿಮಾ’ದಲ್ಲಿ ನಟಿಸಿದ್ದ ಮಗು ಬಾವಿಗೆ ಬಿದ್ದು ಮೃತ್ಯು,ಬಲೂನ್ ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ದುರಂತ

ನ್ಯೂಸ್ ನಾಟೌಟ್ : ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ವರ್ಷದ ಬಾಲಕಿ ಸಾವಿಗೀಡಾದ ಘಟನೆ ಮಡಿಕೇರಿಯ ಗೋಣಿಕೊಪ್ಪಲಿನ ಕೋಟೂರು ಗ್ರಾಮದಿಂದ ವರದಿಯಾಗಿದೆ.

ಪೆಮ್ಮಂಡ ರೋಶನ್, ಇಸು ದಂಪತಿ ಪುತ್ರಿ ಸಿಯಾನ್ (3) ಮೃತ ಕಂದಮ್ಮ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಬಲೂನ್‌ನಲ್ಲಿ ಆಟವಾಡುತ್ತಿದ್ದಾಗ ಮನೆಯ ಸಮೀಪವಿದ್ದ ಬಾವಿಗೆ ಬಲೂನ್ ಬಿದ್ದಿದೆ. ಇದನ್ನು ತೆಗೆಯಲು ಪ್ರಯತ್ನಿಸುತ್ತಿದ್ದ ಸಂದರ್ಭ ಬಾಲಕಿ ಬಾವಿಗೆ ಜಾರಿ ಬಿದ್ದಿದೆ ಎನ್ನಲಾಗಿದೆ. ಮನೆಯ ಒಳಗೆ ಇದ್ದ ಪಾಲಕರು ಮಗುವನ್ನು ಹುಡುಕಿಕೊಂಡು ಬಂದಾಗ ಬಾವಿಯಲ್ಲಿ ಮೃತದೇಹ  ಪತ್ತೆಯಾಗಿದೆ.ಬೀರ್ಯ ಕೊಡವ ಸಿನಿಮಾದಲ್ಲಿ ಸಿಯಾನ್ ಪಾತ್ರ  ಮಾಡಿದ್ದು, ಸಾರ್ವಜನಿಕವಾಗಿ ಸಂತಾಪ ಸೂಚಿಸಿದ್ದಾರೆ.

Related posts

ಮಡಿಕೇರಿ: ಕ್ವಾರೆಂಟೀನ್ ಕ್ಯಾಂಪ್‌ ನಿಂದ ಕೋವಿಡ್ ಸೋಂಕಿತರು ಪರಾರಿ

ಕಾಲೇಜು ವಿದ್ಯಾರ್ಥಿಯ ಅತಿವೇಗದ ಚಾಲನೆ, ಮೂವರು ಶಾಲಾ ವಿದ್ಯಾರ್ಥಿಗಳು ಬಲಿ

ಅಯೋಧ್ಯೆಯಲ್ಲಿ ಹೋಟೆಲ್​​​ನ ಪ್ರತಿ ಕೊಠಡಿಯ ಬೆಲೆ ಕೇಳಿದ್ರೆ ನಿಮ್ಗೂ ಶಾಕ್ ಆಗುತ್ತೆ..!ಅಯೋಧ್ಯೆಯಿಂದ 170 ಕಿ.ಮೀ ದೂರದಲ್ಲಿರುವ ಹೊಟೇಲ್‌ಗಳಿಗೂ ಭಾರಿ ಬೇಡಿಕೆ..!