ಉಡುಪಿಕರಾವಳಿಕ್ರೈಂ

ಕಾರ್ಕಳ: ಲವ್ವರ್ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ..! 25 ದಿನಗಳಿಂದ ಜ್ವರ, ವಾಂತಿಯಿಂದ ಬಳಲಿ ಪತಿ ಸಾವು..!

ನ್ಯೂಸ್ ನಾಟೌಟ್ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಘಟನೆ ಇಂದು(ಅ.25) ತಡವಾಗಿ ಬೆಳಕಿಗೆ ಬಂದಿದೆ.

ಬಾಲಕೃಷ್ಣ (44) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು 25 ದಿನಗಳಿಂದ ಜ್ವರ ವಾಂತಿ ಸಹಿತ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಮಾಲೆ ರೋಗ ಇರಬಹುದು ಎಂದು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದರೂ ವಾಸಿಯಾಗಿರಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೆ ಅಕ್ಟೋಬರ್ 20 ರಂದು ಬಾಲಕೃಷ್ಣ ಸಾವನ್ನಪ್ಪಿದ್ದರು. ಬಾಲಕೃಷ್ಣ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ಮೃತರ ಸಹೋದರ ರಾಮಕೃಷ್ಣ ಎಂಬವರು ಅಜೆಕಾರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ತಾನು ಮತ್ತು ಪ್ರಿಯಕರ ಊಟದಲ್ಲಿ ವಿಷ ಬೆರೆಸಿ ನೀಡಿದ್ದಾಗಿ ತನ್ನ ಸಹೋದರ ಸಂದೀಪ್ ಜೊತೆ ಪ್ರತಿಮಾ ಹೇಳಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.
ಸದ್ಯ ಮೃತರ ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಅಜೆಕಾರು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/10/storm-kannada-news-viral-news-5-84-lakh-people-d-replaced/
https://newsnotout.com/2024/10/lawyer-jagadeesh-kannada-news-viral-news-bigboss-house/
https://newsnotout.com/2024/10/traffic-police-kannada-news-viral-news-car-issue-viral-video-shivamogga/
https://newsnotout.com/2024/10/indian-army-attacked-by-kannada-news-viral-news-4-are-nomore/
https://newsnotout.com/2024/10/kannada-news-darshan-and-mobile-case-revealed-viral-nenws-hf/

Related posts

ಮಂಗಳೂರು ವಕೀಲ ಪದ್ಮರಾಜ್ ಗೆ ಕೈ ಹೈಕಮಾಂಡ್ ತುರ್ತು ಬುಲಾವ್

ಕೊಕ್ಕಡ: SSLC ವಿದ್ಯಾರ್ಥಿನಿ ಪುತ್ತೂರಿನ ಹಾಸ್ಟೆಲ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ..! 15 ವರ್ಷದ ಹುಡುಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇಕೆ?

ಕೆಲಸದ ಒತ್ತಡದಿಂದಾಗಿ ಲೆಕ್ಕ ಪರಿಶೋಧಕಿ ಸಾವನ್ನಪ್ಪಿದ್ರೂ ಅಂತ್ಯಕ್ರಿಯೆಗೆ ಬಾರದ ಸಂಸ್ಥೆಯ ಮುಖ್ಯಸ್ಥ..! ಆಕೆಯ ತಾಯಿ ಕಂಪನಿಗೆ ಬರೆದ ಪತ್ರದಲ್ಲೇನಿದೆ..?