Uncategorized

ಹಣದ ವಿಚಾರದಲ್ಲಿ ಸಹೋದರನ ಅಪಹರಣ,ಕೊಲೆ ಬೆದರಿಕೆ: ೧೦ ಲಕ್ಷ ನೀಡಬೇಕೆಂದು ಬೇಡಿಕೆ,ಓರ್ವ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಹಣಕ್ಕೆ ಬೇಡಿಕೆಯಿಟ್ಟು ಸಹೋದರರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ, ಕೊಲೆ ಬೆದರಿಕೆಯೊಡ್ಡಿದ ಆರೋಪ ಕೇಳಿ ಬಂದಿರುವ ಘಟನೆ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.

೧೦ ಲಕ್ಷ ರೂ. ನೀಡಿದರೆ ಬಿಡುಗಡೆ:

ಅಪಹರಣಕ್ಕೊಳಗಾದ ಸಹೋದರರಲ್ಲಿ ಓರ್ವ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಮತ್ತೋರ್ವ ಅಪಹರಣಕಾರ ಬಳಿಯೇ ಇರುವುದಾಗಿ ತಿಳಿದುಬಂದಿದೆ. ಕೊಯಿಲಾ ನಿವಾಸಿ ನಿಝಾಮ್ ಮತ್ತು ಶಾರೂಖ್ ಎಂಬವರನ್ನು ಜೆಸಿಬಿ ಎಂಬ ಪದದೊಂದಿಗೆ ಕರೆಯಲ್ಪಡುವ ವ್ಯಕ್ತಿಯೊಬ್ಬನ ತಂಡ ಅಪಹರಣ ಮಾಡಿರುವುದಾಗಿ ಆರೋಪಿಸಲಾಗಿದೆ.10 ಲಕ್ಷ ನೀಡಿದರೆ ಮತ್ತೋರ್ವನನ್ನು ಬಿಡುಗಡೆಗೊಳಿಸುತ್ತೇವೆ, ಇಲ್ಲದೇ ಹೋದಲ್ಲಿ ಕೊಲೆ ನಡೆಸಿ ನೀರಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಪರಿಚಿತರ ತಂಡ ಇಬ್ಬರನ್ನೂ ಮಂಗಳೂರಿನ ಮಲ್ಲೂರಿಗೆ ಕರೆದೊಯ್ದಿದ್ದರು ಎನ್ನಲಾಗಿದೆ. ಶಾರೂಖ್ ನ ಪ್ರಾಣ ಅಪಾಯದಲ್ಲಿದೆ ಎಂದು ನಿಝಾಮ್ ತಿಳಿಸಿದ್ದಾರೆ.

ಈ ಘಟನೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts

ಬಿಸಿಲಿನ ಝಳಕ್ಕೆ ಉಡುಪಿಯಲ್ಲಿ ಓರ್ವ, ರಾಯಚೂರಿನಲ್ಲಿ ಐವರು ಸಾವು, ಹೊತ್ತಿ ಉರಿವ ಸೂರ್ಯ ಕಿರಣಕ್ಕೆ ಕಾರು ಸುಟ್ಟು ಕರಕಲು

ಸುಳ್ಯ: ಬೈಕ್ ಗುದ್ದಿ ಬಾಲಕಿ ಸಾವು

ಬಿಪಿನ್ ರಾವತ್‌ ನಿವಾಸಕ್ಕೆ ಪಾರ್ಥಿವ ಶರೀರ, ಮೋದಿ ಸೇರಿದಂತೆ ಗಣ್ಯರು ಭಾಗಿ