ಕ್ರೈಂವೈರಲ್ ನ್ಯೂಸ್

ಕೊನೆಯುಸಿರೆಳೆಯುವವರೆಗೂ ಹಾವು ಕಚ್ಚಿದೆ ಎಂದು ತಿಳಿಯಲಿಲ್ಲವೇ..? ಕೇರಳ ಮೂಲದ ವಿದ್ಯಾರ್ಥಿಯ ಸಾವಿನ ಬಗೆಗಿರುವ ಅನುಮಾನಗಳೇನು?

ನ್ಯೂಸ್ ನಾಟೌಟ್: ಹಾವು ಕಚ್ಚಿದ್ದು ಗೊತ್ತಾಗದೆ ವೈದ್ಯ ವಿದ್ಯಾರ್ಥಿಯೊಬ್ಬ ಕೊನೆಯುಸಿರೆಳೆದ ಘಟನೆ ತುಮಕೂರು ಜಿಲ್ಲೆಯಲ್ಲಿ ಇಂದು(ಡಿ.1) ನಡೆದಿದೆ.
ಕೇರಳ ಮೂಲದ ವಿದ್ಯಾರ್ಥಿ ಸಿದ್ಧಾರ್ಥ ವಿವಿ ಘಟಿಕೋತ್ಸವದಲ್ಲಿ ಪದವಿ ಪಡೆದದ್ದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಎಂಬ ವೈದ್ಯ ವಿದ್ಯಾರ್ಥಿ ಮೃತನಾಗಿದ್ದು, ಬುಧವಾರ ನಡೆದ ವಿವಿ ಘಟಿಕೋತ್ಸವದಲ್ಲಿ ಪದವಿ ಪಡೆದ ಬಳಿಕ ಪಾರ್ಕಿನಲ್ಲಿ ನಿಂತಿದ್ದ ವೇಳೆ ಹಾವು ಕಚ್ಚಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಆದರೆ, ಈತನಿಗೆ ಹಾವು ಕಚ್ಚಿರುವುದು ಗಮನಕ್ಕೆ ಬಂದಿಲ್ಲ. ಮನೆಗೆ ಬಂದ ಕೂಡಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಪ್ಪಿನಂಗಡಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಮೃತದೇಹ ಪತ್ತೆ..! ಯುವಕ ಕೊಲೆಯಾಗಿರುವ ಸಾಧ್ಯತೆ

ಸಂಪಾಜೆ ಬಂಗ್ಲೆಗುಡ್ಡೆ: ಆತ್ಮಹತ್ಯೆಗೆ ಶರಣಾದ ಯುವಕ

ಜಾಸ್ತಿ ಮೊಬೈಲ್ ನೋಡಬೇಡ ಎಂದು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬಾಲಕಿ ಶವವಾಗಿ ಪತ್ತೆ..! ನಿಗೂಢ ಸಾವಿನ ಹಿಂದಿದೆ ಹಲವು ಅನುಮಾನ..!