ಸಾಧಕರ ವೇದಿಕೆ

ಬಂಪರ್ ಲಾಟರಿ: ಒಂದಲ್ಲ ಎರಡಲ್ಲ ಬರೋಬ್ಬರಿ 12 ಕೋಟಿ ರೂ. ಗೆದ್ದ ಪೇಂಟರ್..!

ತಿರುವನಂತಪುರಂ: ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್ಮಸ್-ಹೊಸ ವರ್ಷದ ಲಾಟರಿಯ ಮೊದಲ ಬಹುಮಾನವಾದ 12 ಕೋಟಿ ರೂ. ಗೆದ್ದಿದ್ದಾರೆ.

ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರು ಕ್ರಿಸ್ಮಸ್ ನ್ಯೂ ಇಯರ್ ಬಂಪರ್ 12 ಕೋಟಿ ರೂ. ಲಾಟರಿ ಗೆದ್ದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇಂದು ಬೆಳಿಗ್ಗೆ ಮಾಂಸವನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋಗಿದ್ದೆ. ಆಗ ಲಾಟರಿ ಮಾರಾಟಗಾರ ಸೆಲ್ವನ್ ನಿಂದ ಈ ಟಿಕೆಟ್ ಖರೀದಿಸಿದೆ. ಆದರೆ ಈಗ ಟಿಕೆಟ್ ಗೆ ಬಹುಮಾನ ಬಂದಿರುವುದು ಖುಷಿಯಾಗುತ್ತಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Related posts

ಈಕೆ ಅಂದು ಬಾಲನಟಿ ಇಂದು ಐಎಎಸ್ ಆಫೀಸರ್, ರಮೇಶ್​​ ಅರವಿಂದ್ ಜತೆ ಆ ಪುಟ್ಟ ಬಾಲಕಿ ಯಾರು..?

ಇಂದು ಸೌಂದರ್ಯ ಅಭಿಮಾನಿಗಳ ಪಾಲಿಗೆ ಕರಾಳ ದಿನ,ಖ್ಯಾತ ನಟಿ ನಮ್ಮನ್ನಗಲಿ 19 ವರ್ಷ

ಕಾಲಿನ ಮೂಲಕ ಮತದಾನ ಮಾಡಿದ ಯುವಕ..! ಇಲ್ಲಿದೆ ವೈರಲ್ ವಿಡಿಯೋ