ಕ್ರೈಂ

ಕೊರಗಜ್ಜನ ವೇಷ ಧರಿಸಿದ ಮದುಮಗನ ಮನೆ ಮೇಲೆ ದಾಳಿ

388
Spread the love

ಕಾಸರಗೋಡು : ಕೊರಗಜ್ಜನ ವೇಷ ಧರಿಸಿ ವಿವಾದಕ್ಕೆ ಕಾರಣನಾಗಿದ್ದ ಮದುಮಗನ ಮನೆ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಮನೆಯ ಗೇಟ್ ನ ಗೋಡೆಗೆ ಕಾವಿ ಬಣ್ಣ ಬಳಿದ ಘಟನೆ ವರದಿಯಾಗಿದೆ. ಬೇಕೂರು ಅಗರ್ತಿಮೂಲೆಯಲ್ಲಿರುವ ವರನ ಮನೆಗೆ ಕಲ್ಲೆಸೆಯಲಾಗಿದ್ದು, ಮನೆಯ ಮುಂಭಾಗದ ಎರಡು ಕಿಟಕಿ ಗಾಜುಗಳು ಹುಡಿಯಾಗಿವೆ. ಸೋಮವಾರದಂದು(ಜ. 17) ಮುಂಜಾನೆಯ ವೇಳೆಗೆ ಬೈಕ್ ನಲ್ಲಿ ಬಂದ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

See also  ವಿದ್ಯುತ್ ತಂತಿ ಮೈಮೇಲೆ ಬಿದ್ದು ಪ್ರಾಣಬಿಟ್ಟ ಮಹಿಳೆ..! ಇಲ್ಲಿದೆ ಸಿಸಿ ಟಿವಿ ದೃಶ್ಯ
  Ad Widget   Ad Widget   Ad Widget   Ad Widget   Ad Widget   Ad Widget