ಕರಾವಳಿ

ಮಂಗಳೂರು: ನಾಳೆ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಸಂಸ್ಮರಣಾ ದಿನ ಹಾಗೂ ಶೌರ್ಯ ಪ್ರಶಸ್ತಿ ಪ್ರದಾನ

ನ್ಯೂಸ್ ನಾಟೌಟ್: ವೀರ ಸೇನಾನಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಹೆಸರಿನಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಶೌರ್ಯ ಪ್ರಶಸ್ತಿಯನ್ನು ಬುಧವಾರ ಮಂಗಳೂರಿನಲ್ಲಿ ಕೊಡಮಾಡಲಾಗುತ್ತಿದೆ. ಈ ಸಲ ಸುಬೇದಾರ್ ಏಕನಾಥ್ ಶೆಟ್ಟಿ ಈ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ-ಸಂಸ್ಮರಣಾ ದಿನ ಜೊತೆಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವೂ ಜರುಗಲಿರುವುದು ವಿಶೇಷ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಒಕ್ಕಲಿಗ ಸಮುದಾಯದ ಜಗದ್ಗುರು ಆದುಚುಂಚನಗಿರಿಯ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಪರಮಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ ಇರಲಿದ್ದಾರೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಲವು ಧಾರ್ಮಿಕ ಮುಖಂಡರು, ಗಣ್ಯರು ವೇದಿಕೆಯಲ್ಲಿಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನಿರ್ವಹಿಸಲಿದ್ದಾರೆ. ಮಾಜಿ ಸಿಎಂ ಡಿವಿ ಸದಾನಂದ ಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ್ ಕಾಮತ್‌, ಪುಷ್ಪಾರ್ಚನೆಯನ್ನು ದಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಎಂ. ಎನ್ ನೆರವೇರಿಸಲಿದ್ದಾರೆ.

Related posts

ಮಡಿಕೇರಿ:ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಹುಷಾರ್ , ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದೇನು?

ಉಗ್ರರಿಂದ ಐದು ಮಂದಿಯ ಜೀವ ಉಳಿಸಿದ ಅರಂತೋಡಿನ ಯೋಧ..!

ಮೀಸಲಾತಿ ಬೇಕೆಂದರೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ಹೊಡೆಯಿರಿ..!, ಹಡಪದ ಸ್ವಾಮೀಜಿಯಿಂದ ಪ್ರಚೋದನಕಾರಿ ಹೇಳಿಕೆ