ನ್ಯೂಸ್ ನಾಟೌಟ್: ಎರಡು ಕಾರುಗಳ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ಅಪಘಾತ ಸಂಭವಿಸಿದೆ.
ಎಲೆಕ್ಟ್ರಿಕ್ ಟಾಟ ಟಿಯಾಗೊ ಕಾರು ಮತ್ತು ಟೊಯೊಟಾ ಇಟಿಯೊಸ್ ಕಾರುಗಳ ಮಧ್ಯೆ ಅಪಘಾತ ನಡೆದಿದೆ. ಟಾಟಾ ಕಾರು ಖರೀದಿಸಿ ಕೇವಲ ಮೂರು ದಿನವಷ್ಟೇ ಆಗಿತ್ತು. ಟಾಟಾ ಟಿಯಾಗೊ ಕಾರು ಸುಳ್ಯದಿಂದ ಪುತ್ತೂರು ಕಡೆಗೆ ಹೋಗುತ್ತಿತ್ತು. ಪುತ್ತೂರಿನಿಂದ ಸುಳ್ಯದ ಕಡೆಗೆ ಇಟಿಯೊಸ್ ಕಾರು ಬರುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಕಾರು ಜಖಂ ಜಖಗೊಂಡಿದೆ.