ಕರಾವಳಿಭಕ್ತಿಭಾವ

ಕಟೀಲು ದುರ್ಗೆ, ಬಪ್ಪನಾಡು ದುರ್ಗೆ, ಮಂಗಳಾಂಬೆಗೆ ತಿರಂಗದ ಅಲಂಕಾರ, ನೋಡ ಬನ್ನಿ ನಮ್ಮೂರ ದೇವಿಯರ ಚೆಂದವ..!

ನ್ಯೂಸ್  ನಾಟೌಟ್: ದೇಶದೆಲ್ಲೆಡೆ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ ಗರಿಗೆದರಿದೆ. ಈ ಶುಭ ಸಂದರ್ಭದಲ್ಲಿ ದ.ಕ.ಜಿಲ್ಲೆಯ ದೇವತೆಯರಿಗೂ ದೇಶದ ಹೆಮ್ಮೆಯ ತ್ರಿವರ್ಣ ಧ್ವಜದ ಅಲಂಕಾರದಲ್ಲಿ ಸಿಂಗಾರಗೊಳಿಸಿ ದೇಶಪ್ರೇಮ ಮೆರೆಯಲಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಂಗಳೂರಿನ ಶ್ರೀ ಮಂಗಳಾದೇವಿಯರು ತ್ರಿವರ್ಣ ಧ್ವಜದಲಂಕಾರದಲ್ಲಿ ಕಂಗೊಳಿಸಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತ್ರಿವರ್ಣ ಧ್ವಜದ ಸೀರೆಯನ್ನು ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಮಾಲೆಯ ಅಲಂಕಾರವನ್ನೂ ಮಾಡಲಾಗಿದೆ. ಬಪ್ಪನಾಡಿನ ದುರ್ಗೆಯ ಪ್ರಭಾವಳಿಯನ್ನು ತ್ರಿವರ್ಣ ಧ್ವಜದಿಂದಲೇ ಅಲಂಕಾರ ಮಾಡಲಾಗಿದೆ.

ಅದೇ ರೀತಿ ಮಂಗಳೂರಿನ ಅಧಿದೇವತೆ ಶ್ರೀ ಮಂಗಳಾದೇವಿಗೆ ತಿರಂಗದ ಸೀರೆಯನ್ನೇ ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಹೂಗಳಿಂದಲೇ ಅಲಂಕಾರ ಮಾಡಲಾಗಿದೆ. ಒಟ್ಟಿನಲ್ಲಿ ದ.ಕ.ಜಿಲ್ಲೆಯ ದೇವತೆಗಳಿಗೆ ದೇಶಪ್ರೇಮ ಬೀರುವ ಅಲಂಕಾರ ಮಾಡಿದ್ದು, ಭಕ್ತರಲ್ಲೂ ದೇಶಭಕ್ತಿ ಜಾಗೃತಿ ಮೂಡಿಸುವಂತಾಗಿದೆ

Related posts

ವೀರ ಸೇನಾನಿ ಸಾವರ್ಕರ್‌ ಪೋಸ್ಟರ್‌ ಹಾಕಿದ್ದಕ್ಕೆ ವ್ಯಕ್ತಿಯಿಂದ ಆಕ್ಷೇಪ

ಮೂಡಿಗೆರೆಯಲ್ಲಿ ಬಂಟ್ವಾಳ ವ್ಯಕ್ತಿಯನ್ನು ಪೆಟ್ರೋಲ್‌ ಸುರಿದು ಬರ್ಬರ ಹತ್ಯೆ! ಗಾಂಜಾ ಪೆಡ್ಲರ್‌ಗಳ ಕೃತ್ಯ ಶಂಕೆ

ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ್ದಕ್ಕೆ ತಂಡದಿಂದ ಹಲ್ಲೆ -ಮೂವರ ವಿರುದ್ಧ ಪ್ರಕರಣ ದಾಖಲು