ದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ರಾಮನನ್ನು ಹಾಡಿನ ಮೂಲಕ ಸ್ವಾಗತಿಸಿದ ಕಾಶ್ಮೀರಿ ಹುಡುಗಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್‌: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ಕಾಶ್ಮೀರದ ಯುವತಿಯೊಬ್ಬಳು (kashmiri girl) ರಾಮನನ್ನು ಸ್ವಾಗತಿಸಲು ಸ್ಥಳೀಯ ಭಾಷೆಯಲ್ಲಿ ಹಾಡಿರುವ ವಿಡಿಯೋ ಗಮನ ಸೆಳೆದಿದೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಜನವರಿ 22ಕ್ಕೆ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ ಮೂರು ವರ್ಷಗಳ ನಂತರ, ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, 4,000 ಸಂತರು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮಮಂದಿರದ ಭಾಗವಾಗಿದ್ದ ʼಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನಗಳನ್ನು ಕಳುಹಿಸಿದೆ.

ದೇಗುಲದ ಬಹುನಿರೀಕ್ಷಿತ ಉದ್ಘಾಟನೆಗೆ ದೇಶಾದ್ಯಂತದಿಂದ ಬಹುರೀತಿಯ ತನು- ಮನ- ಧನ ನೆರವು ಹರಿದುಬರುತ್ತಿದೆ. ಈ ನಡುವೆ ಬಟೂಲ್ ಝೆಹ್ರಾ ಎಂಬ ಕಾಶ್ಮೀರಿ ಯುವತಿ ಸ್ಥಳೀಯ ಭಾಷೆಯಲ್ಲಿ ಭಗವಾನ್ ರಾಮನ ಆಗಮನವನ್ನು ಸ್ವಾಗತಿಸುತ್ತಾ ಹಾಡುತ್ತಿರುವ ವೀಡಿಯೊ ವೈರಲ್‌ ಆಗಿದೆ.

ಕೇಂದ್ರ ಮಾಹಿತಿ- ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ವೀಡಿಯೊವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಇಡೀ ದೇಶವೇ ರಾಮನ ಹಬ್ಬವನ್ನು ಆಚರಿಸುತ್ತಿರುವಾಗ, ಸ್ವರ್ಗಕ್ಕಿಂತ ಸುಂದರವಾಗಿರುವ ಕಾಶ್ಮೀರ ಹೇಗೆ ಹಿಂದುಳಿಯಲು ಸಾಧ್ಯ? ಕಾಶ್ಮೀರದ ಮಗಳು ಬಟೂಲ್ ಝೆಹ್ರಾ, ಭಗವಾನ್ ಶ್ರೀರಾಮನನ್ನು ಸ್ವಾಗತಿಸಲು ಸ್ಥಳೀಯ ಭಾಷೆಯಲ್ಲಿ ಸುಂದರವಾದ ಹಾಡನ್ನು ಹಾಡುವ ಮೂಲಕ ಸುಂದರವಾದ ಸಂದೇಶವನ್ನು ನೀಡಿದ್ದಾರೆ. ಕಾಶ್ಮೀರದ ಯುವಕರು ಈಗ ಒಗ್ಗೂಡುವ ಬಗ್ಗೆ ಮಾತನಾಡುತ್ತಿದ್ದಾರೆ, ವಿಭಜಿಸುವ ಬಗ್ಗೆ ಅಲ್ಲ. ಮೋದಿ ಆಡಳಿತದಲ್ಲಿ ಬದಲಾವಣೆ ಸ್ಪಷ್ಟವಾಗಿ ಕಂಡುಬಂದಿದೆ” ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

https://newsnotout.com/2024/01/amezon-forest-civilisation-found/

Related posts

ಚಲಿಸುತ್ತಿದ್ದ ಬುಲೆಟ್ ಬೈಕ್‍ನಲ್ಲೇ ರೋಮ್ಯಾನ್ಸ್ ..ಮದವೇರಿದ ಯುವಕ-ಯುವತಿಗಾಗಿ ಪೊಲೀಸರ ಹುಡುಕಾಟ..!

ಕೆನ್ನೆಗೆ ಬಾರಿಸಿದ ಶಾಸಕ, ತಿರುಗಿಸಿ ಕೊಟ್ಟ ಮತದಾರ..! ಮತಗಟ್ಟೆಯಲ್ಲಿ ಜಟಾಪಟಿ..! ಇಲ್ಲಿದೆ ವೈರಲ್ ವಿಡಿಯೋ

ಈ ಹಸು ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿತಾ? ಈ ಬಗ್ಗೆ ಮನೆ ಮಾಲಿಕ ಹೇಳಿದ್ದೇನು?