ಕಾಸರಗೋಡು: ಭಯೋತ್ಪಾದಕ ಸಂಘಟನೆಯಾದ ಐಸಿಸ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿದ ಇಬ್ಬರು ಮಹಿಳೆಯರನ್ನು ಐಸಿಸ್ ಕಾರ್ಯಕರ್ತರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಬಂಧಿಸಿದೆ. ಕಣ್ಣೂರಿನ ಥಾನ ನಿವಾಸಿಗಳಾದ ಶಿಫಾ ಹಾರಿಸ್ (27) ಮತ್ತು ಮಿಸ್ ಹಾ ಸಿದ್ದಿಖ್ (25) ಳನ್ನು ಎನ್.ಐ.ಎ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ಕಾನೂನುಬಾಹಿರ ಭಯೋತ್ಪಾದಕ ಗುಂಪಿಗೆ ಹೊಸ ಸದಸ್ಯರನ್ನು ನೇಮಕ ಮಾಡಲು ಪ್ರಯತ್ನಿಸುತ್ತಿದ್ದರು ಎಂಬ ಆರೋಪವಿದೆ. ಇವರನ್ನು ಕಣ್ಣೂರಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಬಂಧಿತ ಮಹಿಳೆಯರು ಕೊಲ್ಲಿಯಲ್ಲಿ ಶಿಕ್ಷಣ ಪಡೆದಿದ್ದು ಅನಂತರ ಊರಿಗೆ ಬಂದಿದ್ದರು. ಈ ವೇಳೆ ಐಸಿಸ್ ಬಗ್ಗೆ ಪ್ರಚಾರ ನಡೆಸಿದ್ದು ಯುವಕರನ್ನು ಉಗ್ರರ ತಂಡಕ್ಕೆ ಸೇರ್ಪಡೆಗೊಳಿಸಿದ್ದರೆಂದು ತಿಳಿದುಬಂದಿದೆ.