ಕರಾವಳಿಕೊಡಗು

ಮಂಗಳೂರು:ಗಾಂಜಾ ಮಾರಾಟ ಪ್ರಕರಣ :ವೈದ್ಯ ವಿದ್ಯಾರ್ಥಿ ಸಹಿತ ಮತ್ತೆ ಮೂವರ ಬಂಧನ

ನ್ಯೂಸ್ ನಾಟೌಟ್ : ಮಂಗಳೂರು ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿರುವ ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರನ್ನು ಬಂಧಿಸಲಾಗಿದೆ.ಇದೀಗ ಬಂಧಿತರ ಸಂಖ್ಯೆ 13ಕ್ಕೇರಿದೆ.

ಹಣ್ಣಿನಂಗಡಿಯಲ್ಲಿ ಕೆಲಸ ಮಾಡುವ ಮೊಹಮ್ಮದ್ ಅಫ್ರಾರ್(23), ಖಾಸಗಿ ಕಾಲೇಜಿನ ಅಂತಿಮ ವರ್ಷದ ಫಾರ್ಮಾಡಿ ವಿದ್ಯಾರ್ಥಿ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಅಂತಿಮ ವರ್ಷದ ಪತಾಲಜಿ ಎಂಡಿ ವಿದ್ಯಾರ್ಥಿ ತುಮಕೂರು ಮೂಲದ ಹರ್ಷ ಕುಮಾರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನು ಘಟನೆಗೆ ಸಂಬಂಧಿಸಿದಂತೆ ನಿನ್ನೆ 10 ಮಂದಿಯನ್ನು ಬಂಧಿಸಲಾಗಿತ್ತು, ಇದೀಗ ಮತ್ತೆ ಮೂವರನ್ನು ಪೊಲೀಸರು ಬಂಧಿಸಲಾಗಿದೆ.

ನಿಷೇಧಿತ  ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಪೊಲೀಸರು ನಗರದ ಪ್ರತಿಷ್ಟಿತ 2 ವೈದ್ಯಕೀಯ ಕಾಲೇಜಿನ ಇಬ್ಬರು ವೈದ್ಯರು, ೭ ವೈದ್ಯಕೀಯ  ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ.ಈ ಪೈಕಿ ನಾಲ್ವರು ಯುವತಿಯರೂ ಸೇರಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರು ಮತ್ತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ವಿವಾಹಿತೆಯನ್ನು ವರಿಸುವುದಾಗಿ ದೈವನರ್ತಕ ವಾಗ್ದಾನ, ಕಾರವಾರದ ದೈವಸ್ಥಾನದಲ್ಲಿ ನಡೀತು ಅಚ್ಚರಿ,ನೆಟ್ಟಿಗರಿಂದ ಟೀಕೆ

ಸಂಪಾಜೆ: ಶ್ರೀ ಪಂಚಾನನ ಭಜನಾ ತಂಡದ ಸದಸ್ಯರಿಗೆ ಸನ್ಮಾನ

ಮಠಾಧಿಪತಿಗಳ ಕೈಗೆ ಆಯುಧ ಕೊಡಬೇಕು ಎಂದದ್ದೇಕೆ ಸ್ವಾಮೀಜಿ..? ಲಿಂಗಾಯುತ ಸ್ವಾಮೀಜಿ ಎಚ್ಚರಿಕೆ ನೀಡಿದ್ಯಾರಿಗೆ?