ದೇಶ-ಪ್ರಪಂಚ

ಬಣ್ಣ ಬಣ್ಣದ ಸೀರೆಯುಟ್ಟು ಫುಟ್ಬಾಲ್ ಆಡಿದ ಮಹಿಳೆಯರು, ವಿಡಿಯೋ ವೈರಲ್!

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ಅವರು ಮನಸ್ಸು ಮಾಡಿದರೆ, ಯಾವುದು ಅಸಾಧ್ಯವಲ್ಲ. ಹೌದು ಇದಕ್ಕೆ ಪುಷ್ಟಿ ನೀಡುವಂತೆ ಗ್ವಾಲಿಯರ್ ನ ಮಹಿಳೆಯರ ಗುಂಪೊಂದು ಫುಟ್ಬಾಲ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಹಿರಿಯ ಸದಸ್ಯರ ಸಂಘವು ಜಂಟಿಯಾಗಿ ಆಯೋಜಿಸಿದ ‘ಗೋಲ್ ಇನ್ ಸಾರಿ’ ಸ್ಪರ್ಧಾ ಕೂಟವನ್ನು ನಡೆಸಿದರು. ಅಲ್ಲಿ ಮಹಿಳೆಯರು ಸೀರೆ ಉಟ್ಟು ಮೈದಾನಕ್ಕೆ ಇಳಿದರು. ಬಣ್ಣ ಬಣ್ಣದ ಸೀರೆಯುಟ್ಟು ಮಹಿಳೆಯರ ತಂಡ ಕಾಲಿಗೆ ಶೂ ಧರಿಸಿ ಫುಟ್ ಬಾಲ್ ಆಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿ ಮಹಿಳೆಯರ ಆಟಕ್ಕೆ ಮೆಚ್ಚುಗೆಗಳು ಹರಿದು ಬಂತು.

Related posts

ನಮಾಜ್ ಮಾಡುತ್ತಿದ್ದ ವ್ಯಕ್ತಿಯನ್ನು ಕಂಟೈನರ್‌ ನಿಂದ ಎತ್ತಿ ಎಸೆದು ಕೊಂದ ಪಾಕ್ ಸೇನೆ..! ಇಸ್ಲಾಮಾಬಾದ್‌ ನಲ್ಲಿ ತೀವ್ರಗೊಂಡ ಹಿಂಸಾಚಾರ..! ಇಲ್ಲಿದೆ ವೈರಲ್ ವಿಡಿಯೋ

ವಧು ಬೇಕೆಂದು ಟೀ ಅಂಗಡಿ ಎದುರು ಬ್ಯಾನರ್ ಹಾಕಿದ ವರ..!

ಕುವೈತ್‌ನಲ್ಲಿ ಭೀಕರ ರಸ್ತೆ ಅಪಘಾತ,ಆಂಧ್ರ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಅಂತ್ಯ