ದೇಶ-ಪ್ರಪಂಚ

ನ್ಯೂ ಇಯರ್ ಸೆಲೆಬ್ರೇಷನ್ ನಲ್ಲಿ ಕೊರೊನಾ ನಿಯಮ ಉಲ್ಲಂಘನೆ, ಆರೋಗ್ಯ ಇಲಾಖೆಗೆ ತಲೆಬಿಸಿ

ನ್ಯೂಸ್ ನಾಟೌಟ್ : ಒಂದೆಡೆ ನ್ಯೂ ಇಯರ್ ಸೆಲೆಬ್ರೆಷನ್ , ಇನ್ನೊಂದೆಡೆ ಕೋವಿಡ್ ಅಟ್ಯಾಕ್.. ಇವೆಲ್ಲದರಿಂದ ಆರೋಗ್ಯ ಇಲಾಖೆಗೆ ಟೆನ್ಶನ್ ಹೆಚ್ಚಾಗಿದೆ.ಯಾಕೆಂದರೆ ಹೊಸ ವರ್ಷಾಚರಣೆಯನ್ನು ಯಾವುದೇ ರೂಲ್ಸ್ ಗಳನ್ನು ಫಾಲೋ ಮಾಡದೇ ಆಚರಿಸಿದ್ದು ಗಮನಕ್ಕೆ ಬಂದಿದ್ದು, ಇದೀಗ ಆರೋಗ್ಯ ಇಲಾಖೆ ಟಫ್ ರೂಲ್ಸ್ ಮಾಡಿದೆ. ಕೊರೋನಾ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿದೆ. ಹೆಮ್ಮಾರಿ ಕೊರೋನಾವನ್ನು ಒದ್ದೋಡಿಸಲು ಹರಸಾಹಸ ನಡೆಯುತ್ತಿದೆ. ದೇಶ – ವಿದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.

ವಿಮಾನ ನಿಲ್ದಾಣದಲ್ಲೇ ಕೋವಿಡ್‌ ಪರೀಕ್ಷೆ:

ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿ,ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಚೀನಾ, ಹಾಂಕಾಂಗ್ , ಜಪಾನ್ , ಸೌತ್ ಕೊರಿಯ, ಸಿಂಗಾಪುರ ಹಾಗೂ ಥೈಲಾಂಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ಹೈರಿಸ್ಕ್ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ನೆಗೆಟಿವ್ ವರದಿ ಬರವವರೆಗೂ ಆರೋಗ್ಯ ಇಲಾಖೆಯು 7 ದಿನಗಳ ಕಾಲ ಮನೆಯಲ್ಲಿಯೇ ಐಸೋಲೇಶನ್ ಕಡ್ಡಾಯಗೊಳಿಸಿದೆ.

Related posts

ಬೈಕ್ ಮೇಲೆ 1.61 ಲಕ್ಷ ರೂ. ಟ್ರಾಫಿಕ್ ದಂಡವಿದ್ದರೂ ಬಿಂದಾಸ್ ಸುತ್ತಾಟ..! ಆರೋಪಿ ಪೊಲೀಸ್ ವಶಕ್ಕೆ..!

ಭಾರತ ಸರ್ಕಾರ ಹೀಗೆ ಮಾಡಿದರೆ ನಾವು ಭಾರತದಲ್ಲಿ ಸೇವೆ ನಿಲ್ಲಿಸುತ್ತೇವೆ ಎಂದದ್ದೇಕೆ ವಾಟ್ಸಾಪ್..? ಕೇಂದ್ರ ಸರ್ಕಾರ ನಡೆಸುತ್ತಿರುವ ಕಾನೂನು ಸಮರವೇನು..?

ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಅಪರಿಚಿತ! ಇಲ್ಲಿದೆ ಭೀಕರ ಕೊಲೆಯ ರೋಚಕ ಕಥೆ!