ಕ್ರೈಂ

ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಪಲ್ಟಿ,ಮದುವೆಗೆ ಹೋದವರು ಆಸ್ಪತ್ರೆ ಸೇರಿದರು!

ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ಸೊಂದು ಪಲ್ಟಿಯಾಗಿ 12 ಮಂದಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.ಗಾಯಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಮದುವೆಗೆ ಜನರನ್ನು ಕರೆದೊಯ್ದು ವಾಪಸ್ ಬರುತ್ತಿದ್ದ ವೇಳೆ ಈ ಅವಘಡ ಸಂಭವಿದೆಯೆಂದು ತಿಳಿದು ಬಂದಿದೆ.

ಹಾಸನದ ಗುಂಡೇಗೌಡನಕೊಪ್ಪಲು ನಿವಾಸಿಗಳು ಚನ್ನರಾಯಪಟ್ಟಣಕ್ಕೆ ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿಯಾಗಿದ್ದರಿಂದ ಡಿಕ್ಕಿ ಹೊಡೆದಿದೆ.ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Related posts

ನಕಲಿ ದಾಖಲಾತಿ ನೀಡಿ ಸಬ್‌ ಇನ್‌ ಸ್ಪೆಕ್ಟರ್‌ ಹುದ್ದೆ ಗಿಟ್ಟಿಸಿಕೊಂಡವನ ವಿರುದ್ಧ ಪ್ರಕರಣ ದಾಖಲು..! ಹೇಗಿತ್ತು ನಕಲಿ ದಾಖಲೆ ಸೃಷ್ಟಿಯ ಹಿಂದಿನ ಅಸಲಿ ಪ್ಲಾನ್..?

ಮಂಗಳೂರಿನ ವಿದ್ಯಾರ್ಥಿನಿ ನಾಪತ್ತೆ ಕೇಸ್ ಗೆ ಟ್ವಿಸ್ಟ್..! ಪುತ್ತೂರಿನ ಮುಸ್ಲಿಂ ಯುವಕ ರೂಂ ಗೆ ಬರುತ್ತಿದ್ದ ಎಂದು ಆರೋಪ..! ಸ್ಕೂಟರ್‌ ಸುರತ್ಕಲ್‌ ಬಳಿ ಪತ್ತೆ!

ಬದುಕಿರುವಾಗಲೇ ಅಜ್ಜಿಗೆ ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳು! ತಹಶಿಲ್ದಾರ್ ಬಗ್ಗೆ ಜನರು ಹೇಳೋದೇನು?