ಕರಾವಳಿರಾಜಕೀಯ

ಕಾರ್ಕಳ: ಬಿಜೆಪಿ “ಮಹಾಸಂಪರ್ಕ ಅಭಿಯಾನ “ಕಾರ್ಯಕ್ರಮ, ಬಿಜೆಪಿ ಹಿರಿಯ ಮುಖoಡ ಎಂ.ಕೆ. ವಿಜಯ ಕುಮಾರ್ ಚಾಲನೆ

ನ್ಯೂಸ್ ನಾಟೌಟ್ :ಮೇ ೧೦ರಂದು ನಡೆಯಲಿರುವ ಚುನಾವಣೆ ಹಿನ್ನಲೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತಪ್ರಚಾರ ನಡೆಯುತ್ತಿದ್ದು, ಬಿಜೆಪಿಯ ಕಾರ್ಯಕರ್ತರು ಮನೆ ಮನೆಗೆ ತೆರಳಿದರು.

ಈ ವೇಳೆ ಪುರಸಭಾ ವ್ಯಾಪ್ತಿಯ ವಾರ್ಡ್ ನ ೧೩ ರಲ್ಲಿ ‘ಮಹಾಸಂಪರ್ಕ ಅಭಿಯಾನ’ಕ್ಕೆ ಪಕ್ಷದ ಹಿರಿಯ ಮಖಂಡರಾದ ಎಂ.ಕೆ. ವಿಜಯ ಕುಮಾರ್ ಅವರು ಚಾಲನೆ ನೀಡಿದರು.ಬಳಿಕ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಅವರ ಪರ ಮತ ಯಾಚಿಸಿದರು.ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಈ ವೇಳೆ ಉದ್ಯಮಿಗಳಾದ ವಿಜಯ್ ಶೆಟ್ಟಿ, ಮಂಡಲ ಕಾರ್ಯದರ್ಶಿ ಪ್ರಕಾಶ್ ರಾವ್ , ನಗರ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ನಾಮ ನಿರ್ದೇಶಿತ ಸದಸ್ಯ ಸಂತೋಷ್ ರಾವ್, ವಾರ್ಡ್ ಅಧ್ಯಕ್ಷ ಹರೀಶ್ ದೇವಾಡಿಗ, ಕಾರ್ಯದರ್ಶಿ ನವೀನ್ ಕುಮಾರ್,ನಾಗೇಶ್ ರಾವ್, ದಯಾನಂದ ದೇವಾಡಿಗ, ರತ್ನ ಬಾಲಾಜಿ, ರಾಜೇಶ್ವರಿ, ಸವಿತಾ , ನಿರ್ಮಲಾ ಮೊದಲಾದ ಕಾರ್ಯಕರ್ತರು ಇದ್ದರು.

Related posts

ಉಡುಪಿಯಲ್ಲಿ ನಟ ಪುನೀತ್ ರಾಜ್‌ಕುಮಾರ್..! ಅಪ್ಪು ಜತೆ ಫೋಟೋ ಕ್ಲಿಕ್ಕಿಸಿಕೊಂಡ ಫ್ಯಾನ್ಸ್?

ಶತಮಾನದ ಇತಿಹಾಸವಿರುವ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಗತಿಯ ಕಥೆ, ಸಂತೃಪ್ತ ರೈತರು, ಸದಸ್ಯರ ಬದುಕಲ್ಲಿ ಹೊಸ ಬೆಳಕು

“ಗಂಜಿ – ಚಟ್ನಿ ತಿನ್ನಿ, ಪಾನ್ ಪರಾಗ್ – ಗುಟ್ಕಾ ತಿನ್ನಬೇಡಿ” ಆದಿದ್ರಾವಿಡ ಸಮ್ಮೇಳನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಕರೆ